ಕುಮಟಾ : ಸೃಷ್ಠಿ ಸಂಸ್ಥೆ(ರಿ) ಹಾಗೂ ಭಾರತಿ ಸಂಸ್ಥೆ (ರಿ) ಕುಮಟಾ ಸಂಯುಕ್ತಾಶ್ರಯದಲ್ಲಿ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯಲ್ಲಿ ವಿದ್ಯಾರ್ಥಿಗಳಿಗಾಗಿ“ ವೇದ ಗಣಿತ” ವಿಶೇಷ ಕಾರ್ಯಾಗಾರ ನಡೆಯಿತು.
ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ ಪ್ರೊ. ಯೋಗೇಶ ಭಟ್ಟ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಕಾರ್ಯಾಗಾರದಲ್ಲಿ ಅವರು ವೈದಿಕ ಟ್ರಿಕ್ಸ್‌ನಲ್ಲಿ ಗಣಿತವನ್ನು ಅರ್ಥಮಾಡಿಕೊಳ್ಳುವ ಕುರಿತಂತೆ ವಿವರಿಸಿದರು…
ಕಾರ್ಯಾಗಾರದಲ್ಲಿ ಶಾಲೆಯ ಶಿಕ್ಷಕಕರಾದ ಎನ್ ರಾಮು ಅವರು ಎಲ್ಲರನ್ನು ಸ್ವಾಗತಿಸಿ ಪ್ರೌಢಶಾಲಾ ಹಂತದಲ್ಲಿ ಈ ರೀತಿಯ ಕಾರ್ಯಾಗಾರದ ಅಗತ್ಯವಿದೆ ಎಂದರು. ಸಂಸ್ಥೆಯ ಪ್ರತಿನಿಧಿಗಳಾದ ರಾಘವೇಂದ್ರ ಮಾತನಾಡಿ, ಸೃಷ್ಠಿ ಮತ್ತು ಭಾರತಿ ಸಂಸ್ಥೆಯ ಕಾರ್ಯ ಚಟುವಟಿಕೆಯ ಬಗ್ಗೆ ವಿವರಿಸಿದರು. ಸಪನ್ಮೂಲ ವ್ಯಕ್ತಿಗಳಾದ ಯೋಗಿಶ ಭಟ್ ಅವರು ಕಾರ್ಯಾಗಾರದಲ್ಲಿ ಗಣಿತವನ್ನು ಅರ್ಥ ಮಾಡಿಕೊಳ್ಳುವ ಸರಳ ವಿಧಾನ, ಮಾನಸಿಕ ಸಾಮರ್ಥ್ಯದ ಪ್ರಶ್ನೆಗಳನ್ನು ಬಿಡಿಸುವ ವಿಧಾನದ ಬಗ್ಗೆ ವಿವರಿಸಿದರು. ಶಿಕ್ಷಕರಾದ ಮಹಾದೇವ ಗೌಡ ಅವರು ವಂದಿಸಿದರು. ಉಳಿದಂತೆ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ರೋಹಿದಾಸ ನಾಯಕ ಹಾಗೂ ಇತರೆ ಎಲ್ಲಾ ಶಿಕ್ಷಕರು ಹಾಗೂ ಶಾಲೆಯ ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದು ಸಹಕಾರ ನೀಡಿದರು.