ಬೆಂಗಳೂರು : ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆಯಾಗಿದ್ದು, 22 ಮಂದಿಗೆ ಸ್ಥಾನ ನೀಡಲಾಗಿದೆ. 8 ಮಂದಿ ಉಪಾಧ್ಯಕ್ಷರಲ್ಲಿ ಇಬ್ಬರು ಮಹಿಳೆಯರಿಗೆ ಸ್ಥಾನ ನೀಡಲಾಗಿದ್ದು, 8 ಮಂದಿ ಜಿಲ್ಲಾ ಕಾರ್ಯದರ್ಶಿಯಲ್ಲಿ ನಾಲ್ವರು ಮಹಿಳೆಯರಿಗೆ ಸ್ಥಾನ ನೀಡಲಾಗಿದೆ. ಚಂದ್ರು ಎಸಳೆ, ಎಲ್‌ಟಿ ಪಾಟೀಲ್, ಆರತಿ ಗೌಡ, ಸಂಜಯ ಸಾಳುಂಕೆ ಸೇರಿ ಎಂಟು ಮಂದಿ ಉಪಾಧ್ಯಕ್ಷರುಗಳನ್ನು ಆಯ್ಕೆ ಮಾಡಲಾಗಿದೆ..
ನಿತ್ಯಾನಂದ ಗಾಂವಕರ್, ಸುಬ್ರಾಯ ದೇವಾಡಿಗ, ಸವಿತಾ ಬಾನಾವಳಿ, ಚಂದ್ರಕಲಾ ಭಟ್, ಪಲ್ಲವಿ ಮಡಿವಾಳ, ಶ್ರೀಕಾಂತ್ ನಾಯ್ಕ ಸೇರಿ ಎಂಟು ಜಿಲ್ಲಾ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಸದಾನಂದ ಭಟ್ ಜಿಲ್ಲಾ ವಕ್ತಾರರಾಗಿ, ಜಗದೀಶ್ ನಾಯಕ ಮೊಗಟಾ ಜಿಲ್ಲಾ ಸಹ ವಕ್ತಾರರಾಗಿ ಆಯ್ಕೆಯಾಗಿದ್ದಾರೆ.
ಡ್ಯಾನಿ ಡಿಸೋಜಾ ಮಾಧ್ಯಮ ಸಂಚಾಲಕರಾಗಿ, ಕಿಶನ್ ಕಾಂಬಳೆ ಮಾಧ್ಯಮ ಸಹ ಸಂಚಾಲಕರಾಗಿ ನೇಮಕಗೊಂಡಿದ್ದಾರೆ. ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರೇಮಕುಮಾರ ಆಯ್ಕೆಯಾಗಿದ್ರೆ, ಪ್ರಮೋದ್ ನಾಯ್ಕ, ಶುಭಂ ಕಳಸ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ…
ಮಹಿಳಾ ಮೋರ್ಚಾಗೆ ಶಿವಾನಿ ಶಾಂತಾರಾಮ ಅಧ್ಯಕ್ಷೆ, ಸುಜಾತಾ ಬಾಂದೇಕರ್ ಮತ್ತು ಗೀತಾ ಶಿಕಾರಿಪುರ ಪ್ರಧಾನ ಕಾರ್ಯದರ್ಶಿಗಳು
ಹಿಂದುಳಿದ ವರ್ಗಗಳ ಮೋರ್ಚಾಗೆ ರಾಜೇಂದ್ರ ನಾಯ್ಕ ಅಧ್ಯಕ್ಷ, ಸುಬ್ರಾಯ ನಾಯ್ಕ, ಗಣಪತಿ ಕರಂಜೇಕರ್ ಪ್ರಧಾನ ಕಾರ್ಯದರ್ಶಿಗಳು
ರೈತ ಮೋರ್ಚಾಗೆ ರಮೇಶ್ ನಾಯ್ಕ ಅಧ್ಯಕ್ಷ, ವಿಷ್ಣುಮೂರ್ತಿ ಹೆಗಡೆ ಶಿವಲಿಂಗ ಅಲ್ಲಯ್ಯನವರಮಠ ಪ್ರಧಾನ ಕಾರ್ಯದರ್ಶಿಗಳು
ಎಸ್‌ಸಿ ಮೋರ್ಚಾಗೆ ನಂದನ್ ಬೋರ್ಕರ್, ಗಣೇಶ್ ಹಳ್ಳೇರ, ಹನುಮಂತ ಚಿನಗಿನಕೊಪ್ಪ ಪ್ರಧಾನ ಕಾರ್ಯದರ್ಶಿಗಳು
ಎಸ್‌ಟಿ ಮೋರ್ಚಾಗೆ ಶ್ರೀಕಾಂತ್ ಬಳ್ಳಾರಿ ಅಧ್ಯಕ್ಷ, ಗುಡ್ಡಪ್ಪ ತಳವಾರ, ಚಂದ್ರು ಗೊಂಡ ಭಟ್ಕಳ ಪ್ರಧಾನ ಕಾರ್ಯದರ್ಶಿಗಳು
ಅಲ್ಪಸಂಖ್ಯಾತ ಮೋರ್ಚಾಗೆ ಕುಮಟಾದ ಜಾಯ್‌ಸನ್ ಡಿಸೋಜಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.