ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಹೊನ್ನಾವರದ ಎನ್.ಎಸ್.ಹೆಗಡೆ ನೇಮಕ

ಬೆಂಗಳೂರು : ರಾಜ್ಯ ಬಿಜೆಪಿ, ಜಿಲ್ಲಾ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದೆ. 39 ಸಂಘಟನಾ ಜಿಲ್ಲೆಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಎನ್.ಎಸ್.ಹೆಗಡೆ ನೇಮಕಗೊಂಡಿದ್ದಾರೆ. ಹೊನ್ನಾವರ ಪಟ್ಟಣದ ಕರ್ಕಿಯ ಎನ್.ಎಸ್.ಹೆಗಡೆ, ಈ ಹಿಂದೆ ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾಗಿ ಹಲವು ವರ್ಷ ಕೆಲಸ ಮಾಡಿದ್ರು. ನಂತರ ಪ್ರಭಾರಿಯಾಗಿ ಕೂಡ ಕರ್ತವ್ಯ ನಿರ್ವಹಿಸಿ ಪಕ್ಷದ ನಾಯಕರಿಂದ ಮತ್ತು ಕಾರ್ಯಕರ್ತರಿಂದ ಮೆಚ್ಚುಗೆ ಪಡೆದಿದ್ರು..

ಹಾಲಿ ವೆಂಕಟೇಶ್‌ ನಾಯಕ ಅವರ ಅಧಿಕಾರವಧಿ ಮುಗಿದಿದ್ದು ಅವರೂ ಸೇರಿ, ರಾಜ್ಯದ 39 ಜಿಲ್ಲೆಗಳಲ್ಲಿ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಜನವರಿ ಮೊದಲ ವಾರ ಶಿರಸಿಗೆ ಆಗಮಿಸಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ, ಶಾಸಕ ಹರೀಶ್‌ ಪೂಂಜಾ ಆಕಾಂಕ್ಷಿಗಳ ಪಟ್ಟಿ ತಯಾರಿಸಿದ್ರು. ಈ ವೇಳೆ 11 ಮಂದಿ ಅಧ್ಯಕ್ಷರಾಗುವ ಇಚ್ಚೆ ವ್ಯಕ್ತಪಡಿಸಿದ್ರು ಎನ್ನಲಾಗಿದೆ…

ಮುಖ್ಯವಾಗಿ ಹಳಿಯಾಳದ ಮಾಜಿ ಶಾಸಕ ಸುನಿಲ್‌ ಹೆಗಡೆ, ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಪಕ್ಷದ ಹಾಲಿ ಜಿಲ್ಲಾ ಕಾರ್ಯದರ್ಶಿ ಚಂದ್ರು ಎಸಳೆ, ವಿನೋದ್‌ ನಾಯ್ಕ ರಾಯಲ್‌ ಕೇರಿ, ಭಟ್ಕಳದ ಈಶ್ವರ್‌ ನಾಯ್ಕ, ರಾಜೇಶ್‌ ನಾಯ್ಕ, ಕುಮಟಾದ ಎಂ.ಜಿ.ಭಟ್‌, ಕುಮಾರ್‌ ಮಾರ್ಕಂಡೆ, ಹೇಮಂತ್‌ ಗಾಂವಕರ್‌, ಅಂಕೋಲಾದ ಜಗದೀಶ್‌ ನಾಯಕ ಮೊಗಟಾ ಸ್ಪರ್ಧೆಯಲ್ಲಿದ್ರು ಎನ್ನಲಾಗಿದೆ.. 

ಆದ್ರೆ ಪಕ್ಷಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿದ ಹೊನ್ನಾವರದ ಎನ್. ಎಸ್.ಹೆಗಡೆಯವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಹಿಂದೆ ಉತ್ತರ ಕನ್ನಡದಲ್ಲಿ ‌ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಶಿವರಾಂ ಹೆಬ್ಬಾರ್, ಕುಮಟಾದ ವಿನೋದ್‌ ಪ್ರಭು, ಕಾರವಾರದ ಪ್ರಸಾದ್‌ ಕಾರವಾರಕರ್‌, ಹೊನ್ನಾವರದ ಎಂ.ಜಿ.ನಾಯ್ಕ, ಸಿದ್ದಾಪುರದ ಕೆ.ಜಿ.ನಾಯ್ಕ ಹಾಗೂ ಕುಮಟಾದ ವೆಂಕಟೇಶ್‌ ನಾಯಕ ಜಿಲ್ಲಾಧ್ಯಕ್ಷರಾಗಿದ್ರು…