ಸ್ವಚ್ಛ ತೀರ್ಥ ಅಭಿಯಾನ.. ದೇಗುಲಗಳ ಆವರಣ ಸ್ವಚ್ಛಗೊಳಿಸಿದ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ

ಕಾರವಾರ : ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ ಎಸ್‌. ನಾಯ್ಕ ಅವರು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಪ್ರಯುಕ್ತ ಕಾರವಾರದ ಬೈತಕೋಲದಲ್ಲಿರುವ ಶ್ರೀ ಭೂದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬಳಿಕ ದೇಗುಲದ ಆವರಣ ಸ್ವಚ್ಛಗೊಳಿಸಿದ್ರು…

ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಸ್ವಚ್ಛ ತೀರ್ಥ ಅಭಿಯಾನದ ಹೆಸರಿನಲ್ಲಿ ಜನವರಿ 22ರವರೆಗೆ ಎಲ್ಲಾ ತೀರ್ಥಕ್ಷೇತ್ರ ಮತ್ತು ದೇವಸ್ಥಾನಗಳ ಸ್ವಚ್ಛತೆಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಮತಿ ರೂಪಾಲಿ ಎಸ್.ನಾಯ್ಕ ಅವರು, ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ದೇಗುಲಗಳನ್ನು ಸ್ವಚ್ಛಗೊಳಿಸುವ ಕೈಂಕರ್ಯಕ್ಕೆ ಮುಂದಾಗಿದ್ದಾರೆ…  

ಮೊದಲಿಗೆ ಬೈತಕೋಲದ ದೇವಸ್ಥಾನ ಸ್ವಚ್ಛಗೊಳಿಸಿದ ಬಳಿಕ ರೂಪಾಲಿ ನಾಯ್ಕ ಅವರು, ಬಳಿಕ ಕಾರವಾರದ ಬಾಡದಲ್ಲಿರುವ ಶ್ರೀ ಮಹಾದೇವ ದೇವಸ್ಥಾನ, ಶ್ರೀ ಸಂತೋಷಿ ಮಾತಾ ದೇವಸ್ಥಾನ, ಶ್ರೀ ಸಮಾದೇವಿ ದೇವಸ್ಥಾನ, ನ್ಯೂಕೆಎಚ್‌ಬಿ ಕಾಲೋನಿಯಲ್ಲಿರುವ ಮಾರುತಿ ದೇವಸ್ಥಾನದ ಆವರಣ ಸ್ವಚ್ಛಗೊಳಿಸಿದ್ರು…

ದೇವಸ್ಥಾನದ ಆವರಣಗಳನ್ನು ಸ್ವಚ್ಛಗೊಳಿಸುವ ಕಾರ್ಯ ಪೂರ್ಣಗೊಳಿಸಿದ ರೂಪಾಲಿಯವರು, ನಂತರ ಅಯೋದ್ಯೆಯಿಂದ ಬಂದಂತ  ಅಕ್ಷತೆಯನ್ನು ಪೂಜೆ ಮಾಡುವ ಮೂಲಕ, ಮನೆ ಮನೆಗೆ ತೆರಳಿ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಬರುವಂತೆ ಆಮಂತ್ರಿಸಿದ್ರು. ಇನ್ನು ಜನವರಿ 22ರಂದು ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಪ್ರತಿ ಮನೆಯಲ್ಲೂ ತಪ್ಪದೇ ಕನಿಷ್ಟ 5 ಹಣತೆ ದೀಪಗಳನ್ನು ಹಚ್ಚುವಂತೆ ಹೇಳಿದ್ರು. ಹಾಗೇ ಆ ದಿನದಂದು ತಮ್ಮ ಸಮೀಪದ ದೇವಸ್ಥಾನದಲ್ಲಿ ಪೂಜೆ, ಭಜನೆ ಮಾಡುವ ಮೂಲಕ ದೀಪಾವಳಿಯ ಸಂಭ್ರಮಾಚಾರಣೆ ಮಾಡುವಂತೆ ಹೇಳಿದ್ರು…

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾರತೀಯ ಜನತಾ ಪಕ್ಷದ ನಗರ ಮತ್ತು ಗ್ರಾಮೀಣ ಮಂಡಲ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ರು…