ಕಾರವಾರ : ಕಳೆದ 3 ದಿನಗಳ ಹಿಂದೆ ಮಾಜಾಳಿ ಬಳಿ ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಟ್ಯಾಂಕರ್ ಬಿಡುಗಡೆ ಮಾಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಶಾಸಕರ ವಿರುದ್ಧ ಮಾಜಿ ಶಾಸಕಿ ರೂಪಾಲಿ ನಾಯ್ಕ ಕಿಡಿಕಾರಿದ್ದಾರೆ.
ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್ ಸರ್ಕಾರದ ಹಾಗೂ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಚೆಕ್ ಪೋಸ್ಟ್ ನಲ್ಲಿ ಶಾಸಕರು ಮಾಡಿರುವ ವರ್ತನೆ ನೋಡಿದ್ರೆ ಕಾರವಾರದಲ್ಲಿ ಮತ್ತೆ ಗೂಂಡಾಗಿರಿ ಮರುಕಳಿಸಿದಂತೆ ಕಾಣುತ್ತದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಆತಂಕ ವ್ಯಕ್ತಪಡಿಸಿದ್ರು..
ಕಳೆದ ಮೂರು ದಿನಗಳ ಹಿಂದೆ ಮಾಜಾಳಿ ಬಳಿ ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಟ್ಯಾಂಕರ್ ಬಿಡುಗಡೆ ಮಾಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ. ಟ್ಯಾಂಕರ್‌ನಲ್ಲಿರುವ ಸ್ಪಿರಿಟ್ ಮದ್ಯ ತಯಾರಿಕೆಗೋ ಅಥವಾ ಕೈಗಾರಿಕೆಗೂ ಬಗ್ಗೆ ಪರಿಶೀಲನೆ ಹಾಗೂ ಅದರ ಮೌಲ್ಯವೆಷ್ಟು, ಕೋಟ್ಯಾಂತರ ಮೌಲ್ಯದ್ದಾದ್ರೆ ಅದರ ತೆರಿಗೆ ಎಷ್ಟು ಅನ್ನೋದು ಎಲ್ಲಾ ಗೋತ್ತಿದ್ದು ಕೂಡ ಸ್ಥಳೀಯ ಶಾಸಕರು ಹಾಗೂ ಆಪ್ತರು ಸೇರಿಕೊಂಡು ಒಬ್ಬ ದಕ್ಷ ಅಧಿಕಾರಿ ಮೇಲೆ ದಬ್ಬಾಳಿಕೆ ನಡೆಸಿರುವುದನ್ನು ಬಿಜೆಪಿ ತೀವ್ರ ಖಂಡಿಸುತ್ತದೆ ಎಂದರು..
ಸರ್ಕಾರಿ ಅಧಿಕಾರಿಯೊಬ್ಬರು ಒಳ್ಳೆಯ ಕೆಲಸ ಮಾಡುವಾಗ ತಡೆಯುವುದು ಸರಿಯಲ್ಲ. ಸರ್ಕಾರಿ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾರವಾರ ಸೇರಿದಂತೆ ರಾಜ್ಯಾದ್ಯಂತ ಗೂಂಡಾಗಿರಿ ಆಡಳಿತ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು..
ಈ ವೇಳೆ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ, ಜಿಲ್ಲಾ ಉಪಾಧ್ಯಕ್ಷ ನೈನಾ ನೀಲಾವರ, ಕಾರವಾರ ನಗರ ಗ್ರಾಮೀಣ ಮಂಡಲ ಅಧ್ಯಕ್ಷ, ನಾಗೇಶ್ ಕುರ್ಡೇಕರ್, ಹಾಗೂ ಸುಭಾಷ್ ಗುನಗಿ ಅಂಕೋಲಾ ಮಂಡಲ ಅಧ್ಯಕ್ಷ ಸಂಜಯ್ ನಾಯ್ಕ್ ಹಾಗೂ ಇತರರು ಉಪಸ್ಥಿತರಿದ್ರು..