ಭಟ್ಕಳ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಕಾರವಾರ ಹಾಗೂ ಭಟ್ಕಳ ಪುರಸಭೆ ಜಂಟಿ ಕಾರ್ಯಾಚರಣೆಯಲ್ಲಿ ಸೋಮವಾರದಂದು ಪಟಾಕಿ ತಪಾಸಣೆ ಹಾಗೂ ಅನಧಿಕೃತವಾಗಿ ಪ್ಲಾಸ್ಟಿಕ್ ಮಾರಾಟ ಮಳಿಗೆ ಗಳ ಮೇಲೆ ಧಿಡೀರ್ ದಾಳಿ ನಡೆಸಿದರು
ಕರ್ನಾಟಕ ರಾಜ್ಯ ಸರ್ಕಾರದ ಅದೇಶದನ್ವಯ ಪರವಾನಿಗೆ ಹೊಂದಿದ ತಾಲೂಕಿನ ಪಟಾಕಿ ಮಾರಾಟ ಅಂಗಡಿಗಳ ಪರಿಶೀಲನೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಕಾರವಾರದ ಪರಿಸರ ಅಧಿಕಾರಿ ಬಿ.ಕೆ ಸಂತೋಷ ಹಾಗೂ ತಂಡದ ನೇತೃತ್ವದಲ್ಲಿ ಮೊದಲು ತಾಲೂಕಿನ ಶಂಸುದ್ದೀನ್ ಸರ್ಕಲ್ ನಲ್ಲಿರುವ ಅಪ್ಪಣ್ಣ ಅಂಗಡಿಗೆ ಪಟಾಕಿ ತಪಾಸಣೆ ನಡೆಸಿದರು ಇದೆ ವೇಳೆ ಅಂಗಡಿಯಲ್ಲಿ ಸಾಕಷ್ಟು ಪ್ಲಾಸ್ಟಿಕ್ ಹಾಗೂ ಪ್ಲಾಸ್ಟಿಕ್ ಸಂಬಂದಿತ ವಸ್ತುಗಳನ್ನು ಮಾರಾಟ ಮಾಡುತ್ತಿರುದನ್ನು ಗಮನಿಸಿದ ಅಧಿಕಾರಿಗಳು ಪ್ಲಾಸ್ಟಿಕ್ ತಪಾಸಣೆಗೆ ಮುಂದಾಗಿ ಅಂಗಡಿಯಲ್ಲಿರುವ 50 ಕೆಜಿ ಪ್ಲಾಸ್ಟಿಕ್ ಪ್ಲಾಸ್ಟಿಕ್ ವಶಪಡಿಸಿಕೊಂಡು 5 ಸಾವಿರ ದಂಡ ವಿಧಿಸಿದರು ಬಳಿಕ ಅಲ್ಲೇ ಪಕ್ಕದಲ್ಲಿರುವ ಮಲಬಾರ್ ಸ್ಟೋರ್ ಅಂಗಡಿ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವುದರ ಜೊತೆಗೆ 2 ಸಾವಿರ ದಂಡ ವಿಧಿಸಿದರು ಬಳಿ ಮತ್ತೆ ಪಟ್ಟಣದ ಹೂವಿನ ಪೇಟೆಯಲಿರುವ ಶ್ರೀ ಸಮುಜೇಶ್ವರ ಮಾಹಾದೇವ ಮಾರ್ಕೆಟಿಂಗ್ ಅಂಗಡಿಯ ಮೇಲೆ ದಾಳಿ ಮಾಡಿ ಸುಮಾರು 200ಕೆಜೆ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವುದರ ಜೊತೆಯಲ್ಲಿ 3 ಸಾವಿರ ದಂಡ ವಿಧಿಸಿದರು.
ಒಟ್ಟಾರೆ ಮೂರು ಅಂಗಡಿ ಮೇಲೆ ದಾಳಿ ಮಾಡಿ ಸುಮಾರು 250ಕೆಜಿ ಅಧಿಕ ಪ್ಲಾಸ್ಟಿಕ್ ಹಾಗೂ 10 ಸಾವಿರ ದಂಡ ವಿಧಿಸಿದರು.
ಈ ಸಂದರ್ಭದಲ್ಲಿ ಡಾ.ಗಣಪತಿ ಹೆಗ್ಡೆ ಉಪಪರಿಸರ ಅಧಿಕಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಛೇರಿ ಕಾರವಾರ, ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಪುರಸಭೆ ಆರೋಗ್ಯಾಧಿಕಾರಿ ಸೋಜಿಯ ಸೋಮನ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು