ನಾಮಧಾರಿ ಸಭಾಭವನದಲ್ಲಿ ಬಂಗಾರಪ್ಪನವರ ಜನ್ಮದಿನಾಚರಣೆ ಉದ್ಘಾಟಿಸಿದ ಮಾಜಿ ಸ್ಪೀಕರ್‌ ಕಾಗೋಡು ತಿಮ್ಮಪ್ಪ.

ಹೊನ್ನಾವರ : ತಾಲೂಕಿನ ನಾಮಧಾರಿ ವಿದ್ಯಾರ್ಥಿ ಸಭಾಭವನದಲ್ಲಿ ಜಿಲ್ಲಾ ನಾಮಧಾರಿ ಅಭಿವೃದ್ದಿ ಸಂಘ ಮತ್ತು ಎಸ್. ಬಂಗಾರಪ್ಪ ಪ್ರತಿಷ್ಟಾನ ಜಂಟಿಯಾಗಿ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪನವರ 92 ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ವಿಧಾನ ಸಭಾ ಮಾಜಿ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಉದ್ಘಾಟಸಿದ್ರು.

ಬಳಿಕ ಮಾತನಾಡಿದ ಕಾಗೋಡ ತಿಮ್ಮಪ್ಪ, ವಯಸ್ಸಿನಲ್ಲಿ ತನಗಿಂತ ತುಸು ಕಡಿಮೆ ವಯಸ್ಸಿನವರಾದ ಬಂಗಾರಪ್ಪನವರನ್ನು ರಾಜಕಾರಣಕ್ಕೆ ನಾನೇ ಕರೆ ತಂದಿದ್ದೆ, ಎತ್ತರಕ್ಕೆ ಬೆಳೆದು ಜನ ಪರ, ಶೋಷಿತರ ಪರ , ಹಿಂದುಳಿದವರ ಪರ, ರೈತರ ಪರ ಹೋರಾಟಗಳನ್ನು ನಡೆಸಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದರು.ಬಡವರು ಹಾಗೂ ನೊಂದವರಿಗೆ ನ್ಯಾಯ ಕೊಡಿಸುವ ತುಡಿತ ಹೊಂದಿರುವ ಅಪರೂಪದ‌ ರಾಜಕಾರಣಿಯಾಗಿದ್ರು ಎಂದು ಹೇಳಿದ್ರು.

ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ,  ಅಧಿಕಾರಕ್ಕೆ ಕುರ್ಚಿಗೆ ಅಂಟಿ ಕುಳಿತುಕೊಳ್ಳದೇ ಜನಸಾಮನ್ಯರ ಧ್ವನಿಯಾಗಿ ಆಡಳಿತ ನಡೆಸಿದ ಹಿರಿಮೆ ಬಂಗಾರಪ್ಪನವರಿಗೆ ಸಲ್ಲುತ್ತದೆ. ಜನರ ಹೃದಯ ಅರಿತು ಕೆಲಸ ಮಾಡಿದವರು. ಆದ್ದರಿಂದ ಅವರ ವಿಶ್ವ ಆರಾಧನಾ, ಆಶ್ರಯ, ಪ್ರಸಿದ್ದ ಜನಪರ ಯೋಜನೆಗಳಾಗಿ ಇಂದಿಗೂ ಇವೆ.  ಅವರ ಹಾದಿಯಲ್ಲಿಯೇ ಶಿರಸಿ ಶಾಸಕ ಭೀಮಣ್ಣ ನಾಯ್ಕ ಸಾಗಿದ್ದಾರೆ.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಬಂಗಾರಪ್ಪನವರ ಆದರ್ಶದಿಂದ ಅವರು ತೋರಿಸಿದ ಮಾರ್ಗದರ್ಶನದಿಂದ ಬಂದ ಶಿಷ್ಯನೆಂದು ಹೆಮ್ಮೆಯಿಂದ ಹೇಳುತ್ತೇನೆ. ಬಂಗಾರಪ್ಪ ಕೇವಲ ನಾಲ್ಕುವರೆ ವರ್ಷ ಅಧಿಕಾರ ಅನುಭವಿಸಿದರೂ ಮುಖ್ಯಮಂತ್ರಿಯಾಗಿ ಕೇವಲ 2 ವರ್ಷ ಮಾತ್ರ ಇದ್ದರು. ತಮ್ಮ ಕಿರಿದಾದ ಅಧಿಕಾರ ಅವಧಿಯಲ್ಲಿ ಮಾಡಿದ ಸಾಧನೆ ದೇಶದ ಇನ್ಯಾವ ಮುಖ್ಯಮಂತ್ರಿಗಳೂ ಸಾಧಿಸಿಲ್ಲ. ಎಂದು ಹೇಳಿದ್ರು..

ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾವಂಕರ್, ಮಾಜಿ ಜಿ.ಪಂ.ಅಧ್ಯಕ್ಷ ಆರ್.ಎಸ್.ರಾಯ್ಕರ್, ದಿ.ಎಸ್.ಬಂಗಾರಪ್ಪ ಪ್ರತಿಷ್ಟಾನದ ಅಧ್ಯಕ್ಷ ಆರ್.ಪಿ.ನಾಯ್ಕ, ಜಿಲ್ಲಾ ನಾಮಧಾರಿ ಸಂಘದ ಕಾರ್ಯದರ್ಶಿ ಎನ್.ಕೆ.ನಾಯ್ಕ ಉಪಸ್ಥಿತರಿದ್ರು..