ಕುಮಟಾ : ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಹನುಮ ಧ್ವಜ ತೆರವುಗೊಳಿಸಿರುವುದನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆದಿದೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು ಕಚೇರಿ ಎದುರು, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯ್ತು.
ಹನುಮ ಧ್ವಜವನ್ನು ಬಲವಂತವಾಗಿ ಇಳಿಸಿ, ಗ್ರಾಮಸ್ಥರ ಭಾವನಗಳಿಗೆ ನೋವುಂಟು ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರದ, ಹಿಂದೂ ವಿರೋಧಿ ದೋರಣೆ ಖಂಡಿಸಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದ್ರು…
ಈ ವೇಳೆ ಮಾತನಾಡಿದ ಶ್ರೀಮತಿ ರೂಪಾಲಿ ಎಸ್. ನಾಯ್ಕ ಅವರು, ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಹನುಮ ಧ್ವಜವನ್ನು ಯಾಕೇ ಕೆಳಗಿಳಿಸಲಾಗಿದೆ. ಅದು ಸರ್ಕಾರದ ಧ್ವಜವಲ್ಲ. ಗ್ರಾಮಸ್ಥರೇ ಸೇರಿಕೊಂಡು ಮಾಡಿರುವ ಧ್ವಜ. ಅದನ್ನು ಬೇಕು ಅಂತಲೇ ಕೆಳಗೆ ಇಳಿಸಲಾಗಿದೆ. ಇದ್ರಲ್ಲಿ ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ಧೋರಣೆ ಎದ್ದು ಕಾಣುತ್ತಿದೆ. ಇದನ್ನು ನಾವು ಖಡಾ ಖಂಡಿತವಾಗಿ ಖಂಡಿಸುತ್ತೆವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು…
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎನ್ ಎಸ್ ಹೆಗಡೆ, ಕುಮಟಾ ಶಾಸಕರಾದ ದಿನಕರ್ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಕೆ. ಜಿ. ನಾಯ್ಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಹೆಗಡೆ, ಚಂದ್ರು ಎಸಳೆ, ಪ್ರಭಾರಿ ಗಜಾನನ್ ಗುನಗಾ, ಕುಮಟಾ ಬಿಜೆಪಿ ಮಂಡಲ ಅಧ್ಯಕ್ಷ ಹಾಗೂ ಜಿಲ್ಲೆಯ ನೂರಾರು ಬಿಜೆಪಿ ಕಾರ್ಯಕರ್ತರು ಸೇರಿ ಭಾರಿ ಪ್ರತಿಭಟನೆ ನಡೆಸಿದರು.