ದಾಂಡೇಲಿ : ಹಲವು ಸಮಸ್ಯೆಗಳು ಅಲ್ಲಿದ್ದರೂ ಅದನ್ನು ಸುಂದರವಾದ ಮತ್ತು ವಿಶಾಲವಾದ ಬಸ್ ನಿಲ್ದಾಣ. ಆದರೆ ಈ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗಾಗಿ ವಿಶ್ರಾಂತಿ ಕೊಠಡಿಯಂದಿದ್ದು, ಆ ಕೊಠಡಿಯ ಒಳಗಡೆ ಗೋಡೆಯಲ್ಲಿ ಬರೆದಿರುವ ಅಸಭ್ಯ ನಡವಳಿಕೆಯ ಪ್ರೇಮ ಬರಹಗಳು ಹಾಗೂ ಚಿತ್ರಗಳು ವಾಂತಿ ಬರುವಂತಿದೆ. ಅಂದ ಹಾಗೆ ಇದು ದಾಂಡೇಲಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಮಹಿಳೆಯರ ವಿಶ್ರಾಂತಿ ಕೊಠಡಿಯ ಗೋಡೆಯಲ್ಲಿ ಕಂಡುಬಂದಿರುವ ಅಸಭ್ಯ ನಡವಳಿಕೆಯ ಬರಹಗಳು.
ಹಾಗೆಂದ ಮಾತ್ರಕ್ಕೆ ಈ ಕೊಠಡಿಯ ಒಳಗಡೆ ಪುರುಷರಿಗೆ ಪ್ರವೇಶವಿಲ್ಲ, ಹಾಗಾದ್ರೆ ಈ ರೀತಿಯ ಅಸಭ್ಯ ಬರಹಗಳನ್ನು ಯಾರು ಬರೆದಿರಬಹುದು, ಗೀಚಿರಬಹುದೆಂಬ ಮಾಧ್ಯಮದವರ ಪ್ರಶ್ನೆಗೆ ಯುವತಿಯರು ಈ ಕೃತ್ಯವನ್ನು ಮಾಡಿದ್ದಾರೆ ಎನ್ನುವ ವಾಸ್ತವಾಂಶ ಬೆಳಕಿಗೆ ಬಂದಿದೆ. ಹೆಣ್ಣೊಂದು ಕಲಿತರೆ ಮನೆ ಮಂದಿ ಕಲಿತಂತೆ ಎಂಬ ಗಾಧೆಯಿದೆ. ಅದೇ ರೀತಿ ಹೆಣ್ಣೊಂದು ಈ ರೀತಿ ಬರೆದರೆ ಮುಂದೇನು ಎನ್ನುವ ಪ್ರಶ್ನೆ ಚರ್ಚೆಯಲ್ಲಿದೆ. ಇನ್ನಾದರೂ ಈ ರೀತಿಯ ವಿಲಕ್ಷಣ ಬರಹಗಳನ್ನು ಬರೆಯುವುದನ್ನು ನಿಲ್ಲಿಸಬೇಕೆಂಬ ಮನವಿಯನ್ನು ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಮಾಧ್ಯಮದ ಮೂಲಕ ಮನವಿಯನ್ನು ಮಾಡಿದ್ದಾರೆ.