ದಾಂಡೇಲಿಯ ಹಳೆನಗರದ ಸೋರಗಾವಿ ಸಿಬಿಎಸ್ಸಿ ಶಾಲಾ ಕಟ್ಟಡ ಪರಿಶೀಲಿಸಿದ ಲೋಕಾಯುಕ್ತ ಅಧಿಕಾರಿಗಳು

ದಾಂಡೇಲಿ:- ಹಳೆನಗರ ಸಭೆಯ ಕಟ್ಟಡದಲ್ಲಿರುವ ಸೋರಗಾವಿ ಸಿಬಿಎಸ್ಸಿ ಶಾಲೆಗೆ ಗುರುವಾರ ಲೋಕಾಯುಕ್ತ ಅಧಿಕಾರಿ ಎಸ್.ಪಿ ಕುಮಾರಚಂದ್ ಭೇಟಿ ನೀಡಿ ಶಾಲಾ ಕಟ್ಟಡವನ್ನು ಪರಿಶೀಲನೆ ನಡೆಸಿದ್ರು…

ಸೋರಗಾವಿ ಸಿಬಿಎಸ್ಸಿ ಶಾಲೆಯ ಕಟ್ಟಡ ದುಸ್ಥಿತಿಯಲ್ಲಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಡಿ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ, ಗುರುವಾರ ಲೋಕಾಯುಕ್ತ ಎಸ್.ಪಿ ಕುಮಾರಚಂದ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಿ ಕಟ್ಟಡದ ಸ್ಥಿತಿಯನ್ನು ಪರಿಶೀಲನೆ ನಡೆಸಿದ್ರು..

ಇದು ಹಳೆಯ ಶಾಲಾ ಕಟ್ಟಡವಾಗಿದ್ದು, ಸದ್ಯ 900 ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿರುವುದರಿಂದ ಏನಾದ್ರೂ ಅವಘಡ ನಡೆದ್ರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಎಂದು ಸಾರ್ವಜನಿಕರು ಹಾಗೂ ಶಾಲಾ ಆಡಳಿತ ಮಂಡಳಿ ಅಳಲು ತೋಡಿಕೊಂಡಿದ್ರು. ಈ ಹಿನ್ನೆಲೆಯಲ್ಲಿ ನಾವು ಕಟ್ಟಡ ಪರಿಶೀಲಿಸಿ ಕ್ರಮ ಕೈಗೊಳ್ಳಲು ಬಂದಿದ್ದೇವೆ ಎಂದು ಲೋಕಾಯುಕ್ತ ಎಸ್.ಪಿ ಕುಮಾರಚಂದ್ ಹೇಳಿದ್ರು..

ನಂತರ ಸ್ಥಳೀಯರಾದ ಗೌರೀಶ್ ಬಾಬ್ರೇಕರ್ ಅವರ ಮನವಿಯ ಮೇರೆಗೆ ಲೋಕಾಯುಕ್ತ ಎಸ್ ಪಿ ಕುಮಾರಚಂದ್ ನಗರದ ಬಸ್ ನಿಲ್ದಾಣದ ಮುಂಭಾಗದ ಜೆಎನ್ ರಸ್ತೆಯ ಬದಿಯಲ್ಲಿ ಅನಾಹುತಕ್ಕೆ ಕಾರಣವಾಗಿದ್ದ ವಿದ್ಯುತ್ ಕಂಬವನ್ನು ಪರಿಶೀಲಿಸಿದ್ರು.. ಈ ವೇಳೆ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರಾದ ದೀಪಕ್ ನಾಯಕ, ನಗರ ಸಭೆಯ ಸಹಕಾರದಲ್ಲಿ ಕಂಬವನ್ನು ಸ್ವಲ್ಪ ಮುಂದಕ್ಕೆ ಸ್ಥಳಾಂತರಿಸುವುದಾಗಿ ಹೇಳಿದ್ರು..

ಈ ವೇಳೆ ತಹಶೀಲ್ದಾರ್ ಶೈಲೇಶ್ ಪರಮಾನಂದ, ಪೌರಾಯುಕ್ತ ಆರ್.ಎಸ್.ಪವಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆ, ಲೋಕಾಯುಕ್ತ ಸಿಪಿಐ ವಿನಾಯಕ ಬಿಲ್ಲವ ಹಾಗೂ ಮೊದಲಾದ ಅಧಿಕಾರಿಗಳು ಮತ್ತು ಲೋಕಾಯುಕ್ತ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ರು..

ಸಂದೇಶ್‌ ಜೈನ್‌ ನುಡಿಸಿರಿ ನ್ಯೂಸ್‌, ದಾಂಡೇಲಿ..