ಕಳೆದ 8 ತಿಂಗಳಿನಿಂದ ಪಪಂ ಅಧ್ಯಕ್ಷ, ಉಪಾಧ್ಯಕ್ಷರಿಲ್ಲ.ಜನಪ್ರತಿನಿಧಿಗಳಿದ್ದರೂ,ಅಧಿಕಾರಿಗಳ ದರ್ಬಾರು ನಡೆಯುತ್ತಿದೆ – ಪ.ಪಂ ಸದಸ್ಯ ಸೋಮೇಶ್ವರ ನಾಯ್ಕ

ಯಲ್ಲಾಪುರ: ಕಳೆದ ಎಂಟು ತಿಂಗಳಿನಿಂದ ಪಪಂ ಅಧ್ಯಕ್ಷ, ಉಪಾಧ್ಯಕ್ಷರಿಲ್ಲ. ಜನಪ್ರತಿನಿಧಿಗಳಿದ್ದರೂ,ಅಧಿಕಾರಿಗಳ ದರಬಾರು ನಡೆಯುತ್ತಿದೆ. ಪ.ಪಂ ಮುಖ್ಯಾಧಿಕಾರಿ ಹಾಗೂ ಇಂಜನಿಯರ್ ಬೇಕಾಬಿಟ್ಟಿ ಆಡಳಿತ ನಡೆಸುತ್ತಿದ್ದಾರೆ ಎಂದು ಪ.ಪಂ ಸದಸ್ಯ ಸೋಮೇಶ್ವರ ನಾಯ್ಕ ಆರೋಪಿಸಿದರು.
ಅವರು ಶನಿವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಂತ ಆಸ್ತಿಯಂಬಂತೆ ಮುಖ್ಯಾಧಿಕಾರಿಗಳು ಮನಸ್ಸಿಗೆ ಬಂದಂತೆ ಕಾಮಗಾರಿ ಮಾಡುತ್ತ, ಸದಸ್ಯರ ಭಾವನೆಗೆ ಬೆಲೆ ಕೊಡುತ್ತಿಲ್ಲ. ವಡ್ಡರ ಕಾಲೋನಿ ರಸ್ತೆ ಹಾಳಾಗಿದೆ. ರವೀಂದ್ರ ನಗರದಲ್ಲಿ 20 ಲಕ್ಷದ ರಸ್ತೆ ಗುದ್ದಲಿ ಪೂಜೆ ಆಗಿದ್ದರೂ, ವರ್ಷದಿಂದ ಕಾಮಗಾರಿ ಅಗಿಲ್ಲ. ಕೇಳಿದರೆ ಹಾರಿಕೆ ಉತ್ತರ ಕೊಡುತ್ತಾರೆ.
ವೆಂಕಟ್ರಮಣ ಮಠದ ಎದುರು ಅವೈಜ್ಞಾನಿಕವಾಗಿ ಬಸ್ ತಂಗುದಾಣ ಮಾಡಿದ್ದು, ಜನರಿಗೆ ಉಪಯೋಗ ಆಗುತ್ತಿಲ್ಲ.
ಹಿಂದೂ ರುದ್ರಭೂಮಿಯಲ್ಲಿ ಪಿಲ್ಲರ್ ತುಂಡಾಗಿದ್ದರೂ,ದುರಸ್ತಿ, ನಿರ್ವಹಣೆ ಆಗಿಲ್ಲ. ಅಲಂಕಾರಿಕ ದೀಪ ಸರಿಯಾಗಿ ಬೆಳಗುತ್ತಿಲ್ಲ. ಕೆಲಸ‌ ಪೂರ್ಣಗೊಂಡಿಲ್ಲ. ಯಾವ ಇಲಾಖೆಯಿಂದ ಎಷ್ಟು ದಿನದಲ್ಲಿ‌ಮುಗಿಯುತ್ತದೆ ಸ್ಪಷ್ಟಿಕರಣ ನೀಡಬೇಕು.ಜಿಲ್ಲಾಧಿಕಾರಿಗಳು ಪರಿಶೀಲಿಸಿ ಮುಖ್ಯಾಧಿಕಾರಿ ಮತ್ತು ಇಂಜಿನಿಯರ್ ವಿರುದ್ದ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ಪಪಂ ಸದಸ್ಯರಾದ ಆದಿತ್ಯ ಗುಡಿಗಾರ,ರಾಜು ನಾಯ್ಕ,ಪುಷ್ಪಾ ನಾಯ್ಕ,ಕಲ್ಪನಾ ನಾಯ್ಕ,ಸೈಯ್ಯದ್ ಕೈಸರ್, ಇದ್ದರು