ಯಲ್ಲಾಪುರದಲ್ಲಿ ಜ. 27ರಿಂದ 29ರವರೆಗೆ ಬೆಳ್ಳಿಹಬ್ಬ- ಬೆಳ್ಳಿ ಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಗಣಪತಿ ಕಂಚಿಪಾಲ್

ಯಲ್ಲಾಪುರ: ಸಮಾನ‌ ಮನಸ್ಕರು ಸೇರಿ ೧೯೯೪ ರಲ್ಲಿ ಜಾನಪದ ಕಲಾ ಸಂಘಟನೆ ಪ್ರಾರಂಭಿಸುವ ಸದಿಚ್ಛೆಯಿಂದ ಮೈತ್ರಿ ಕಲಾ ಬಳಗ ಗ್ರಾಮೀಣ ಭಾಗದಲ್ಲಿ ಹುಟ್ಟು ಹಾಕಿದ್ದು,ಜ ೨೭ ರಿಂದ ೨೯ ರ ವರೆಗೆ ಬೆಳ್ಳಿಹಬ್ಬ ಕಾರ್ಯಕ್ರಮ ನಡೆಯಲಿದೆ ಎಂದು ಕಲಾ ಬಳಗದ ಅಧ್ಯಕ್ಷ ಗಣಪತಿ ಕಂಚಿಪಾಲ್ ಹೇಳಿದರು.
ಅವರು ಬುಧವಾರ ಬೆಳ್ಳಿ ಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾಹಿತಿ ನೀಡುತ್ತಿದ್ದರು. ಶ್ರಮದಾನದ ಮೂಲಕ ಕಲಾ ಬಳಗದ ಕಟ್ಟಡ ನಿರ್ಮಿಸಿ, ಗ್ರಾಮೀಣ ಭಾಗದಲ್ಲಿ ಗೃಂಥಾಲಯ ಸ್ಥಾಪಿಸಿದ್ದು ಗ್ರಾಮೀಣ ಓದುಗರಿಗೆ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಕೊಡಲಾಗಿದೆ. ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ‌ನೀಡುತ್ತ ನಿರಂತರ ಕಲಾ ಸೇವೆ ಮಾಡುತ್ತ ಬಂದಿದೆ ಎಂದರು.
ಜ.27 ರಂದು ಸಂಜೆ 4.30 ಕ್ಕೆ ಮೈತ್ರಿ ಬೆಳ್ಳಿ ಹಬ್ಬವನ್ನು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಲಿದ್ದು, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಕಾವ್ಯ ಗಾಯನ, ಕುಂಚನೃತ್ಯ, ಜಾನಪದ ಸಂಗೀತ, ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಜ.28 ರಂದು ಮಧ್ಯಾಹ್ನ 3.30 ಕ್ಕೆ ಗೀತ ಸಂಗಮ, ಸನ್ಮಾನ, ಪುರಸ್ಕಾರ, ಮಾತೃಮಂಡಳಿಯ ಸದಸ್ಯರಿಂದ ಕೃಷ್ಣ ಸಂಧಾನ ತಾಳಮದ್ದಲೆ, ಭರತನಾಟ್ಯ, ಸಪ್ತಸ್ವರ ಸೇವಾ ಸಂಸ್ಥೆಯ ಮಹಿಳಾ ಕಲಾವಿದರಿಂದ ಶಶಿಪ್ರಭಾ ಪರಿಣಯ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಜ.29 ರಂದು ಬೆಳಗ್ಗೆ 10 ಕ್ಕೆ ಕನ್ನಡ ಸುದ್ದಿ ಮಾಧ್ಯಮಗಳು ಹಾಗೂ ಸವಾಲುಗಳು ಕುರಿತು ಗೋಷ್ಠಿ, ಸಾಹಿತಿ ವನರಾಗ ಶರ್ಮಾ ರಚನೆಯ ಪರ್ವತ ಕಾದಂಬರಿ ಲೋಕಾರ್ಪಣೆ, ಮಹಿಳಾ ವೈಚಾರಿಕ ಗೋಷ್ಠಿ, ಸಮಾರೋಪ ಸಮಾರಂಭ, ಪ್ರಸಿದ್ಧ ಕಲಾವಿದರಿಂದ ಶರಸೇತು ಬಂಧನ, ದ್ರೌಪದಿ ಪ್ರತಾಪ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.
ಬಳಗದ ಕಾರ್ಯದರ್ಶಿ ಮಂಜುನಾಥ ಗಾಂವ್ಕರ ಮೂಲೆಮನೆ, ಪ್ರಮುಖರಾದ ನಾರಾಯಣ ಗಾಂವ್ಕಾರ ಗೋಡೆಪಾಲ್,ನಾಗಪ್ಪ ಗಾಂವ್ಕಾರ ಗೋಡೆಪಾಲ್,ಅನಂತ ಗಾಂವ್ಕಾರ, ಸತ್ಯನಾರಾಯಣ ಚಿಮ್ನಳ್ಳಿ ಇದ್ದರು.