ಯಲ್ಲಾಪುರದಲ್ಲಿ ನ.೧ ರಿಂದ ೫ ರ ವರೆಗೆ ನಡೆಯಲಿದೆ ಮೂವತ್ತನೇ ಸಂಕಲ್ಪ ಉತ್ಸವ

ಯಲ್ಲಾಪುರ: ಮೂವತ್ತನೇ ಸಂಕಲ್ಪ ಉತ್ಸವವನ್ನು ನ ೧ ರಿಂದ ೫ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ಶುಕ್ರವಾರ ಉತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಮಾಹಿತಿ ನೀಡುತ್ತಿದ್ದರು.
ಉತ್ಸವವನ್ನು ಸ್ವರ್ಣವಲ್ಲಿ ಶ್ರೀಗಳು ಉದ್ಘಾಟಿಸಲಿದ್ದಾರೆ. ಸಮಾರೋಪದಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ಗಣ್ಯರು ಭಾಗವಹಿಸಲಿದ್ದಾರೆ.
ಉತ್ಸವದಲ್ಲಿ ಭೀಷ್ಮವಿಜಯ,ಸುಧನಾರ್ಜುನ,ಕನಕಾಂಗಿ ಕಲ್ಯಾಣ,ಕೀಚಕವಧೆ,ಚೂಡಾಮಣಿ ಯಕ್ಷಗಾನ ಪ್ರಸಿದ್ದ ಕಲಾವಿದರಿಂದ ಪ್ರದರ್ಶನ ಆಗಲಿದೆ.ಅಲ್ಲದೇ ಯೋಗ ನೃತ್ಯ,ಭಜನಾಮೃತ,ಕೀರ್ತನೆ,ಭಕ್ತಿ ಸಂಗೀತ ಮುಂತಾದ ಕಾರ್ಯಕ್ರಮ ನಡೆಯಲಿದೆ. ಸಾಧಕರಿಗೆ ಸಂಕಲ್ಪ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಇದೆ ಎಂದರು.
ಪ್ರಮಾಣದ ಸಿ ಜಿ ಹೆಗಡೆ,ಜಿಎಸ್ ಭಟ್ಟ,ಗೋಪಣ್ಣ ತಾರಿಮಕ್ಕಿ,ಮಾಚಣ್ಣ ವರದ್,ನಾಗೇಂದ್ರ ಕವಾಳೆ,ಪಿ ಜಿ ಹೆಗಡೆ ಕಳಚೆ,ಪ್ರಸಾದ ಹೆಗಡೆ,ಶ್ರೀಪಾದ ಭಟ್ ಇದ್ದರು.