ಯಲ್ಲಾಪುರದ ವೆಂಕಟರಮಣ ಸಭಾಮಂಟಪದಲ್ಲಿ ಕಸ್ತೂರಿ ರಂಗನ್‌ ವಿರೋಧಿ ಜಾಥಾದ ಕುರಿತು ಪೂರ್ವಭಾವಿ ಸಭೆ


ಯಲ್ಲಾಪುರದ ವೆಂಕಟರಮಣ ದೇವಸ್ಥಾನದ ಸಭಾಮಂಟಪದಲ್ಲಿ ಕಸ್ತೂರಿ ರಂಗನ್‌ ವಿರೋಧಿ ಜಾಥಾದ ಕುರಿತು ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು..

ಕಸ್ತೂರಿ ರಂಗನ್ ವರದಿಯ ಕರಡು ಪ್ರತಿಯಲ್ಲಿ ಅತೀ ಸೂಕ್ಷ್ಮ ಪರಿಸರ ಪ್ರದೇಶ ಗುರುತಿಸುವಿಕೆ ಅವೈಜ್ಞಾನಿಕವಾಗಿವೆ. ಸೆಟಲೈಟ್ ಚಿತ್ರಣದ ಆಧಾರದ ಮೇಲೆ ವಾಸ್ತವಿಕ ಮತ್ತು ನೈಜತೆಯ ಚಿತ್ರಣಕ್ಕೆ ವ್ಯತಿರಿಕ್ತವಾಗಿರುವುದರಿಂದ ಕಸ್ತೂರಿ ರಂಗನ್ ವರದಿಯನ್ನ ಸಂಪೂರ್ಣವಾಗಿ ತಿರಸ್ಕರಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ರು…

ಗ್ರಾಮದ ಶೇ.20 ಕ್ಕಿಂತ ಹೆಚ್ಚು ಭೌಗೋಳಿಕ ಪ್ರದೇಶ ಜೀವವೈವಿಧ್ಯ ಪರಿಸರ ಸೂಕ್ಷ್ಮ ಪ್ರದೇಶವನ್ನಾಗಿ ಸೇರಿಸಲ್ಪಟ್ಟಿದೆ. ಘೋಷಿಸಿದ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಗ್ರಾಮ ಮಟ್ಟದ ಜನಾಭಿಪ್ರಾಯ ಅಥವಾ ಭೌದ್ದಿಕ ಸರ್ವೇ ಮಾಡಿ ವಿಷಯ ಸಂಗ್ರಹ ಮಾಡಿಲ್ಲ. ಪಶ್ಚಿಮ ಘಟ್ಟ ಪ್ರದೇಶವನ್ನು ರಕ್ಷಣೆ ಹಾಗೂ ಸಂರಕ್ಷಿಸಲು ಅಸ್ತಿತ್ವದಲ್ಲಿರುವ ಕಾನೂನು, ನೀತಿ- ನಿಯಮ ಇರುವುದರಿಂದ ಹೊಸಮಾನದಂಡದ ಅವಶ್ಯಕತೆ ಇರುವುದಿಲ್ಲ ಎಂದರು ಹೇಳಿದ್ರು..

ತಾಲೂಕು ಅಧ್ಯಕ್ಷ ಭೀಮ್ಸಿ ವಾಲ್ಮೀಕಿ, ಪ್ರಮುಖರಾದ ಮಹಾಬಲೇಶ್ವರ ಭಟ್ಟ ಬಾಸಲ್, ನಾಗರಾಜ ಮರಾಠಿ ಆನಗೋಡ, ನೂರಹಮ್ಮದ್ ಮದನೂರು, ಸುಬ್ರಾಯ ಭಟ್, ನರಸಿಂಹ ನಾಯ್ಕ ಕುಂದರಗಿ, ಸೀತಾರಾಮ ನಾಯ್ಕ ಕುಂದರಗಿ, ಅನಂತ ಗೌಡ ಮಾವಿನಮನೆ, ರಾಜಾರಾಮ ಕಿರವತ್ತಿ, ರಾಘವೇಂದ್ರ ಕುಣಬಿ ಮಲವಳ್ಳಿ, ಭಾಸ್ಕರ ಗೌಡ ಹಿತ್ಲಳ್ಳಿ, ಶೇಖರ್ ನಾಯ್ಕ ಹಿತ್ಲಳ್ಳಿ, ರಾಘವೇಂದ್ರ ನಾಯ್ಕ ಗುಳ್ಳಾಪುರ ಇತರರು ಉಪಸ್ಥಿತರಿದ್ರು..