ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಾರ್ಯಾಲಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ರೋಸರಿ ಕಾನ್ವೆಂಟ್ ಹೈಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ ಉ.ಕನ್ನಡ ಶೈಕ್ಷಣಿಕ ಜಿಲ್ಲೆಯ 2023-24ನೇ ಸಾಲಿನ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಗೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದ್ರು..
“ನಮ್ಮದು ಸುಶಿಕ್ಷಿತರ ಜಿಲ್ಲೆ,ಪ್ರತಿಭೆಗಳಿಗೆ ಕೊರತೆ ಇಲ್ಲ.ಆದರು ಕೆಲವೊಂದು ವಿಚಾರದಲ್ಲಿ ಉತ್ತರ ಕರ್ನಾಟಕಕ್ಕಿಂತ ನಾವು ಹಿಂದೆ ಉಳಿದಿದ್ದೇವೆ. ಕರಾವಳಿಯಲ್ಲಿರಬೇಕಾದ ಮೀನುಗಾರಿಕೆ ಯುನಿವರ್ಸಿಟಿ ವಿಜಯಪುರದಲ್ಲಿರುವುದು ವಿಪರ್ಯಾಸ. ನಮ್ಮಲ್ಲಿ ಕನಿಷ್ಟ ಒಂದೇ ಒಂದು ಮೀನುಗಾರಿಕೆ ವಿಶ್ವ ವಿದ್ಯಾಲಯಗಳಿಲ್ಲದಿರುವುದು ಇದಕ್ಕೆ ನಿದರ್ಶನವಾಗಿದೆ ಎಂದು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದ್ರು..
ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಎನ್.ಜೆ ನಾಯ್ಕ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿಯೂ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸುವುದು ಪಾಲಕ-ಪೋಷಕರ ಜವಾಬ್ದಾರಿಯಾಗಿದೆ. ಹೊನ್ನಾವರದ ನೆಲ ಯಕ್ಷಗಾನ ಕಲಾವಿದ ಚಿಟ್ಟಾಣಿ ಹೆಗಡೆಯವರಂತಹ ಅನೇಕ ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದೆ. ಇಂತಹ ಸ್ಥಳದಲ್ಲಿ ಪ್ರತಿಭಾ ಕಾರಂಜಿ ಯಶಸ್ವಿಯಾಗಿ ಆಯೋಜನೆಯಾಗಿ ಇದು ಇತರರಿಗೆ ಮಾದರಿಯಾಗಲಿದೆ ಎಂದು ಹೇಳಿದ್ರು..
ಶಿಲ್ಪಿ ಉಳಿಪೆಟ್ಟು ನೀಡಿ ಶಿಲೆಯನ್ನು ಮೂರ್ತಿಯಾಗಿ ರೂಪಿಸಿದಂತೆ ಶಿಕ್ಷಕರು ವಿದ್ಯಾರ್ಥಿಗಳನ್ನು ನಾಲ್ಕಾರು ಜನ ಪೂಜಿಸುವ ಮೂರ್ತಿಯಂತೆ ಮಾಡುವ ಮಹತ್ತರ ಜವಾಬ್ದಾರಿ ಹೊಂದಿದ್ದಾರೆ. ನಮ್ಮ ಕಲಿಕೆ ಅವಧಿಯಲ್ಲಿ ಒಳ್ಳೆಯ ಗುರುವು ಸಿಗುವುದು ಅದೃಷ್ಟವೇ ಸರಿ. ಪ್ರತಿಭಾ ಕಾರಂಜಿಯಲ್ಲಿ ಆಯ್ಕೆಯಾದವರು ರಾಜ್ಯಮಟ್ಟಕ್ಕೆ ತಲುಪಿ ಜಯಗಳಿಸುವಂತಾಗಲಿ ಎಂದು ಪ. ಪಂ ಸದಸ್ಯೆ ಮೇಧಾ ನಾಯ್ಕ ಶುಭ ಹಾರೈಸಿದ್ರು..
ಈ ವೇಳೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪ್ರಕಾಶ್ ನಾಯ್ಕ,ಎಮ್.ಡಿ ಹರಿಕಾಂತ ಅವರನ್ನು ಸನ್ಮಾನಿಸಲಾಯ್ತು.ಕಾರ್ಯಕ್ರಮದಲ್ಲಿ
ಜಿಲ್ಲಾ ಉಪನಿರ್ದೇಶಕಿ ಲತಾ ನಾಯ್ಕ, ಬಿಇಓ ಜಿ.ಎಸ್.ನಾಯ್ಕ, ಪ್ರಾ.ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆನಂದ ಗಾಂವ್ಕರ್, ತಾಲೂಕಾ ಅಧ್ಯಕ್ಷ ಎಮ್.ಜಿ ನಾಯ್ಕ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಆರ್.ಟಿ.ನಾಯ್ಕ, ವಿವಿಧ ಶಿಕ್ಷಕರ ಸಂಘಗಳ ಅಧ್ಯಕ್ಷ ಎಲ್.ಎಮ್ ಹೆಗಡೆ, ಸಾಧನಾ ಬರ್ಗಿ, ಹಾಗೂ ವಿವಿಧ ಶಾಲಾ ಶಿಕ್ಷಕರು ಉಪಸ್ಥಿತರಿದ್ರು..