ಹೊನ್ನಾವರದ ನ್ಯೂ ಇಂಗ್ಲೀಷ್‌ ಸ್ಕೂಲ್‌ನಲ್ಲಿ ಮಕ್ಕಳ ದಿನಾಚರಣೆ – ನರ್ಸರಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು


ಹೊನ್ನಾವರದ ನ್ಯೂ ಇಂಗ್ಲೀಷ್‌ ಸ್ಕೂಲಿನ ನರ್ಸರಿ ವಿಭಾಗದಲ್ಲಿ ಮಕ್ಕಳ ದಿನಾಚರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.



ನೆಹರು ಜಯಂತಿಯ ಪ್ರಯುಕ್ತ ಆಚರಿಸಲಾಗುವ ಮಕ್ಕಳ ದಿನಾಚರಣೆಯನ್ನು ಹೊನ್ನಾವರದ ನ್ಯೂ ಇಂಗ್ಲೀಷ್‌ ಸ್ಕೂಲಿನ ನರ್ಸರಿ ವಿಭಾಗದಲ್ಲಿ ವಿಶೇಷವಾಗಿ ಆಚರಣೆ ಮಾಡಿದ್ರು. ಮಕ್ಕಳೇ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ್ರು. ಮಕ್ಕಳಿಗಾಗೇ ಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಪುಟ್ಟ, ಪುಟ್ಟ ಮಕ್ಕಳೇ ಕಾರ್ಯಕ್ರಮ ನಿರೂಪಣೆ ಮಾಡುವ ಮೂಲಕ ಗಮನ ಸೆಳೆದರು. ನರ್ಸರಿ ಮಕ್ಕಳು ಚಲನಚಿತ್ರ ಗೀತೆಗೆ ಹೆಜ್ಜೆ ಹಾಕುವ ಮೂಲಕ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.



ಈ ವೇಳೆ ಕಾರ್ಯಕ್ರಮದಲ್ಲಿ ನರ್ಸರಿಯ ಮುಖ್ಯಾದ್ಯಾಪಕಿ, ಪ್ರತಿಮಾ ನಾಯ್ಕ, ಹಾಗೂ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು..