ಹೊನ್ನಾವರದ ಕೋಟ-ತುಂಬೆಬೀಳು ಗ್ರಾಮದಲ್ಲಿ LC-68 ಕೊಂಕಣ ರೈಲ್ವೆ ಗೇಟಿನಿಂದ ಆಗುತ್ತಿರುವ ಸಮಸ್ಯೆ ಪರಿಹಾರಕ್ಕಾಗಿ ಹೋರಾಟ.



ಹೊನ್ನಾವರ :- ತಾಲೂಕಿನ ಅನಂತವಾಡಿ ಗ್ರಾಮ ಪಂಚಾಯತ್ ಕೋಟ -ತುಂಬೆಬಿಳು ಗ್ರಾಮದ LC-68 ಕೊಂಕಣ ರೈಲ್ವೆ ಗೆಟಿನಿಂದಾಗುತ್ತಿರುವ ಸಮಸ್ಯೆ ಪರಿಹಾರಕ್ಕಾಗಿ ಕೋಟ – ತುಂಬೆಬಿಳು – ಅನಂತವಾಡಿ ರೈಲ್ವೆ ಗೇಟ್ ಮೇಲ್ಸೇತುವೆ ಹೋರಾಟ ಸಮಿತಿಯವರು ಹೊನ್ನಾವರ ಉಳಿಸಿ – ಬೆಳೆಸಿ ಹಾಗೂ ಇನ್ನಿತರ ಸಂಘಟನೆಗಳೊಂದಿಗೆ ಇದೇ ಬರುವ ನವೆಂಬರ್‌ 23 ರಂದು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

ಪ್ರಥಮವಾಗಿ ಇದೇ ಬರುವ ನವೆಂಬರ್ 23 ರಂದು ಹೊನ್ನಾವರ ಶರಾವತಿ ಸರ್ಕಲ್ ನಿಂದ ಕಾಲ್ನಡಿಗೆ ಮೂಲಕ ಮಾನ್ಯ ತಹಸೀಲ್ದಾರರಿಗೆ ಮಾನವೀಯಲ್ಲಿ ಶೀಘ್ರವಾಗಿ ರೈಲ್ವೆ ಗೇಟ್ ಮೇಲ್ಸೇತುವೆ ಮಾಡುವ ಬಗ್ಗೆ ಮನವಿ ನೀಡುವುದು. ಇಲ್ಲದೆ ಹೋದಲ್ಲಿ ನಾವುಗಳು ಮುಂಬರುವ ಲೋಕಸಭಾ ಚುನಾವಣೆ ಭಹಿಸ್ಕರಿಸುವುದು ಹಾಗೂ ಮುಂದಿನ ದಿನದಲ್ಲಿ ಎಲ್ಲ ಅಧಿಕಾರಿಗಳಿಗೆ ಮನವಿ ನೀಡಿ ರೈಲು ತಡೆ ನಡೆಸುವುದು ಎಂದು ನಿರ್ಣಯ ಕೈಗೊಂಡಿರುತ್ತೇವೆ ಎಂದು ಮಾಧ್ಯಮಕ್ಕೆ ಕೋಟ – ತುಂಬೆಬಿಳು – ಅನಂತವಾಡಿ ರೈಲ್ವೆ ಗೇಟ್ ಮೇಲ್ಸೇತುವೆ ಹೋರಾಟ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.