1200 ಚಾಕ್‌ಪೀಸ್‌ ಬಳಸಿ ರಾಮಮಂದಿರದ ಕಲಾಕೃತಿ ರಚಿಸಿದ ಹೊನ್ನಾವರದ ಹುಡುಗ

ಹೊನ್ನಾವರ ತಾಲೂಕಿನ ಗೇರುಸೊಪ್ಪದ ,ಬಸಾಕುಳಿಯ ಚಂದ್ರಕಲಾ ಮತ್ತು ಮಂಜುನಾಥ್ ನಾಯ್ಕ್ ದಂಪತಿಯ ಪುತ್ರ ಪ್ರದೀಪ್ ಮಂಜುನಾಥ್ ನಾಯ್ಕ್ , ಚಿಕ್ಕಂದನಿಂದಲೂ ತಮ್ಮನ್ನ ತಾವು ಕಲೆಯಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ, ಚಿತ್ರಕಲೆ ,ತಬಲಾ ,ಸಂಗೀತ , ಚಾಕ್ ಪೀಸ್ ಆರ್ಟ್ ಹೀಗೆ ಹಲವು ಕಲೆಯನ್ನು ಮಾಡುತ್ತಿದ್ದು, ಹಿಂದೆ 2021 ಮೇ 22 ರಂದು 18 ಚಾಕ್ ಪೀಸ್ ನಲ್ಲಿ ರಾಷ್ಟ್ರಗೀತೆ ಕೆತ್ತಿ ಇಂಡಿಯಾ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸಾಧನೆ ಮಾಡಿದ್ದಾರೆ ಹಾಗೆ ಬುದ್ಧ , ಗಾಂಧೀಜಿ , ಐಫೆಲ್ ಟವರ್, ಸೂರ್ಯನಮಸ್ಕಾರ ದ ಆಕೃತಿ ಹೀಗೆ ಹತ್ತು ಹಲವು ಆಕೃತಿಯನ್ನು ಮಾಡಿ ಇತ್ತೀಚಿ ಗೆ ರಾಮ್ ಮಂದಿರದ ಉದ್ಘಾಟನೆಯ ನಿಮಿತ್ತ ತಮ್ಮದಾದಂತಹ ವಿಶೇಷ ಕಲೆಯನ್ನ ಮಾಡಿದ್ದಾರೆ, ಆಗಸ್ಟ್ 22 ,2021ರಲ್ಲಿ ಸರಿ ಸುಮಾರು 1200 ಚಾಕ್ ಪೀಸ್ ಬಳಸಿ 25 ದಿನಗಳು 250 ಹೆಚ್ಚು ಗಂಟೆಯ ನಿರಂತರ ಪ್ರಯತ್ನದ ಫಲವಾಗಿ ರಾಮ್ ಮಂದಿರದ ಮಾದರಿ ಕಲಾಕೃತಿಯನ್ನು ಮಾಡಿದ್ದಾರೆ…

ಹಾಗಾಗಿ ರಾಮ್ ಮಂದಿರದ ಉದ್ಘಾಟನೆಯ ದಿನವೇ ತಮ್ಮ ಕಲೆಯನ್ನ ಶ್ರೀ ಗುತ್ತಿಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ತಂದೆ ತಾಯಿ, ಗುರುಹಿರಿಯರ ಸಮ್ಮುಖದಲ್ಲಿ ಶ್ರೀ ಗೋವಿಂದ ಎಸ್ ನಾಯ್ಕ್ ಅಧ್ಯಕ್ಷತೆಯಲ್ಲಿ, ಶ್ರೀ ಸೀಮಾ ಮುಖ್ಯಪ್ರಾಣ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸೂರಾಲು ಚಂದ್ರಶೇಕರ್ ಭಟ್ ಅವರ ದಿವ್ಯಹಸ್ತದಿಂದ ಅನಾವರಣ ಮಾಡಲಿದ್ದಾರೆ…..ಪ್ರಸ್ತುತ ಅವರು ಸ್ನಾತಕೋತ್ತರ ಪದವಿಯನ್ನ ಜೆ. ಎಸ್. ಎಸ್ ವಿದ್ಯಾಸಂಸ್ಥೆ ವಿದ್ಯಾಗಿರಿ ಧಾರವಾಡದಲ್ಲಿ ಮಾಡುತ್ತಿದ್ದಾರೆ.