ಸಿದ್ದಾಪುರ : ಕಸ ವಿಲೇವಾರಿ ಘಟಕಕ್ಕೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ಲಾಸ್ಟಿಕ್ ವಸ್ತುಗಳು ನಾಶವಾದ ಘಟನೆ ಪಟ್ಟಣದಲ್ಲಿ ನಡೆದಿದೆ. ಸಿದ್ದಾಪುರ ಜೋಗ ರಸ್ತೆಯಲ್ಲಿರುವ ಘಟಕಕ್ಕೆ ಮಂಗಳವಾರ ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳೀಯರ, ಪಟ್ಟಣ ಪಂಚಾಯತ್ ದವರ ಸಹಾಯ ದೊಂದಿಗೆ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದರು ಆದರೆ ಬೆಂಕಿ ವ್ಯಾಪಕ ಪ್ರಮಾಣದಲ್ಲಿರುವುದರಿಂದ ಬೆಂಕಿ ಆರಿಸಲು ಹರ ಸಾಹಸ ಪಡುವಂತಾಯಿತು. ಘಟನೆಯಲ್ಲಿ ಎಷ್ಟು ಹಾನಿಯಾಗಿದೆ ಯಾವೆಲ್ಲ ವಸ್ತುಗಳು ಸುಟ್ಟುಹೋಗಿದೆ ಎನ್ನುವ ಮಾಹಿತಿ ಅಧಿಕಾರಿಗಳ ಮೂಲಗಳಿಂದ ತಿಳಿದು ಬರಬೇಕಿದೆ.