ಸಿದ್ದಾಪುರ. ತಾಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಶ್ರೀ ಭುವನೇಶ್ವರಿ ದೇವಾಲಯ ಆಡಳಿತ ಸಮಿತಿ ಮತ್ತು ಸುಷಿರ ಸಂಗೀತ ಪರಿವಾರ ಭುವನಗಿರಿ ಕಲ್ಲರೆಮನೆ ಇವರ ಸಂಯೋಜನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು .
ರವಿವಾರ ನಡೆದ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಸಿದ್ಧಾರ್ಥ ಬೆಳ್ಮಣ್ಣು ಬೆಂಗಳೂರು ಮತ್ತು ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ರಾಗ ಬಿಲಾಸ್ ಖಾನಿ ತೋಡಿಯಲ್ಲಿ ಮಹಾದೇವ ಗಂಗಾಧರ ಪರಶುಧರ ಕೃಪಾಳು ಎಂಬ ಕೃತಿಯನ್ನು ಸಿದ್ದಾರ್ಥ ಬೆಳ್ಮಣ್ಣು ಸುಧೀರ್ಘವಾಗಿ ಪ್ರಸ್ತುತಪಡಿಸಿದರು. ನಂತರ ಶ್ರೀರಂಗಪುರಾಧೀಶ್ವರಿ ಶಾರದೆ, ಕರೆದರೆ ಬರಬಾರದೆ ಗುರುರಾಯ, ತಪ್ಪು ನೋಡದೆಯೇ ಬಂದೆಯಾ ಎನ್ನಯ್ಯ ತಂದೆ, ಭವಾನಿ ದಯಾನಿಧೆ ಮುಂತಾದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರ ಮೆಚ್ಚುಗೆ ಪಡೆದರು.