ಶಿರಸಿ-ಕುಮಟಾ ರಸ್ತೆಯಲ್ಲಿ ಸಂಚರಿಸುವ ವಾಹನವನ್ನು ಸಿದ್ದಾಪುರ ಮೂಲಕ ಸಂಚರಿಸಲು ಈಗಾಗಲೇ ಸೂಚನೆ ನೀಡಿದ್ದು ರಸ್ತೆ ದುರಸ್ತಿಗೊಳಿಸಿ ಸಂಚಾರಕ್ಕೆ ಅವಕಾಶ ನೀಡಿ ಎಂದು ವಿವಿಧ ಸಂಘಟನೆಯಿಂದ ಮನವಿ

ಸಿದ್ದಾಪುರ : ತಾಲೂಕಿನಲ್ಲಿನ ರಸ್ತೆ ದುರಸ್ತಿಗೊಳಿಸದೆ ರಸ್ತೆ ಸುಧಾರಣೆ ಕಾರಣದಿಂದಾಗಿ ಶಿರಸಿ-ಕುಮಟಾ ರಸ್ತೆಯಲ್ಲಿ ಸಂಚರಿಸುವ ವಾಹನವನ್ನು ಸಿದ್ದಾಪುರ ಮೂಲಕ ಸಂಚರಿಸಲು ಈಗಾಗಲೇ ಸೂಚನೆ ನೀಡಿದ್ದು ಇಲ್ಲಿಯ ರಸ್ತೆಗಳು ಮತ್ತಷ್ಟು ಹಾಳಾಗುವುದರಿಂದ ರಸ್ತೆ ದುರಸ್ತಿಗೊಳಿಸಿ ಸಂಚಾರಕ್ಕೆ ಅವಕಾಶ ನೀಡಿ ಎಂದು ವಿವಿಧ ಸಂಘಟನೆ ಅವರು ತಹಸಿಲ್ದಾರ್ ಗೆ ಮನವಿ ಸಲ್ಲಿಸಿದರು. ದೇವಿಮನೆ ಘಾಟ್ ರಸ್ತೆ ಬಂದಾಗುವ ಕಾರಣದಿಂದ ಆ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ವಾಹನಗಳು ನ 1 ರಿಂದ ಸಿದ್ದಾಪುರ-ಕುಮಟಾ (ಬಡಾಳ) ಹಾಗೂ ಸಿದ್ದಾಪುರ-ಕುಮಟಾ (ಮಾವಿನಗುಂಡಿ) ಮಾರ್ಗದಲ್ಲಿ ಸಂಚರಿಸುವುದಾಗಿ ಈಗಾಗಲೇ ಮಾಹಿತಿ ಇದೆ. ಇಲ್ಲಿನ ರಸ್ತೆಗಳು ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ ಮತ್ತು ಹಾಳಾದ ರಸ್ತೆ ಕಾರಣದಿಂದ ವಾಹನ ಸಂಚಾರಗಳಿಗೆ ಅನೇಕ ಆಕಸ್ಮಿಕ ಘಟನೆಗಳು ಸಂಭವಿಸುತ್ತಾ ಇದೆ. ಇದು ಇನ್ನೂ ಮುಂದೆ ಹೆಚ್ಚಾಗಿ ಸಾರ್ವಜನಿಕ ಜೀವ ಹಾನಿಗೆ ಕಾರಣವಾಗಲಿದೆ. ಆದರೆ ಕಾಮಗಾರಿ ಅಥವಾ ರಸ್ತೆ ಸುಧಾರಣೆ ಅಭಿವೃದ್ಧಿ ಮಾಡುವಾಗ ಸ್ಥಳೀಯ-ಸಂಘ ಸಂಸ್ಥೆಗಳೊAದಿಗೆ ಚರ್ಚಿಸದೆ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡದಿದ್ದಲ್ಲಿ ಇದರ ವಿರುದ್ಧ ಉಗ್ರ ಹೋರಾಟ ಮಾಡಲು ಹಿಂಜರಿಯುವುದಿಲ್ಲ.ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ
ತಾಲೂಕಾ ನಿವೃತ್ತ ನೌಕರರ ಸಂಘ, ಲಯನ್ಸ್ ಕ್ಲಬ್ ಸಿದ್ದಾಪುರ , ಶ್ರೀ ಸಂಕಲ್ಪ ಸೇವಾ ಸಂಸ್ಥೆ , ರೈತ ಸಂಘ , ನಾಡದೇವಿ ಹೋರಾಟ ವೇದಿಕೆ, ಜಿಲ್ಲಾ ರೈತ ಸಂಘ,ಜಾಗೃತ ವೇದಿಕೆ, ಕನ್ನಡ ತಾಯಿ ಭುವನೇಶ್ವರಿ ವೇದಿಕೆ, ಡಿ ಎಸ್ ಎಸ್, ವಣಿಕ್ ಸಂಘ ಸಿದ್ದಾಪುರ ಮುಂತಾದ ಹಲವು ಸಂಘ ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.