ಶಾನ್ಸು ಕ್ರೀಡೆಯ ರಾಜ್ಯಮಟ್ಟದ ಚಾಂಪಿಯನ್ ಶಿಪ್‌ನಲ್ಲಿ ಕಂಚಿನ ಪದಕ ಪಡೆದ ಅಲೋಕ ನಾಗೇಂದ್ರ ನಾಯ್ಕ

ಹೊನ್ನಾವರ:ತಾಲೂಕಿನ ಸಾಲ್ಕೊಡ ಗ್ರಾಮದ ಹಂದಿಗದ್ದೆಯ ಅಲೋಕ ನಾಗೇಂದ್ರ ನಾಯ್ಕ ಬೀದರ್ ಜಿಲ್ಲಾ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 22ನೇ ರಾಜ್ಯಮಟ್ಟದ ಚಾಂಪಿಯನ ಶಿಪನಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಎರಡನೇ ಬಾರಿ ಸಾಧನೆ ಮಾಡಿರುತ್ತಾನೆ.

ಅಲೋಕ್ ಈತನು ಜಿಲ್ಲೆಯ ವುಶು ಅಸೋಸಿಯೇಷನಯಿಂದ ಆಯ್ಕೆಯಾದ ರಾಯಲ್ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದಾನೆ. ಬೀದರ್ ಜಿಲ್ಲೆಯ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸೀನಿಯರ್ ಶಾನ್ಸು ಕ್ರೀಡೆಯ 60 ಕೆಜಿ ಒಳಗಿನ ವಿಭಾಗದಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಗ್ರಾಮ ಹಾಗೂ ತಾಲೂಕು ಮತ್ತು ಜಿಲ್ಲೆಗೆ ಕೀರ್ತಿ ತಂದಿರುತ್ತಾನೆ.
ವುಶು ಅಸೋಸಿಯೇಷನ್ ಜನರಲ್ ಸೆಕ್ರೆಟರಿಯಾದ ರಾಘವೇಂದ್ರ ಹೊನ್ನಾವರ ಇವರ ರಾಯಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಹೊನ್ನಾವರ ತಾಲೂಕಿನ ಸಾಲ್ಕೋಡ್ ಗ್ರಾಮದ ಹಂದಿಗದ್ದೆಯ ಪ್ರೇಮ ಮತ್ತು ನಾಗೇಂದ್ರ ನಾಯ್ಕ್ ರ ಪುತ್ರನಾದ ಇವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾವರದಲ್ಲಿ ಬಿಕಾಂ ಮೊದಲ ವರ್ಷ ದಲ್ಲಿ ಅಧ್ಯಯನ ಮಾಡುತ್ತಿದ್ದಾನೆ.ಇವರ ಸಾಧನೆಗೆ ತರಬೇತಿದಾರರಾದ ರಾಘವೇಂದ್ರ ಹೊನ್ನಾವರ ಇವರು ಸಂತಸ ವ್ಯಕ್ತಪಡಿಸಿ,ಅಭಿನಂದಿಸಿರುತ್ತಾರೆ.