ಸೌತ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್’ನಲ್ಲಿ ಮಿಂಚಿದ ದಾಂಡೇಲಿ ಕರಾಟೆ ಕ್ಲಬ್ ಹಾಗೂ ಕ್ಲಾಸಸ್ ವಿದ್ಯಾರ್ಥಿಗಳು

ದಾಂಡೇಲಿ: ಹುಬ್ಬಳ್ಳಿಯಲ್ಲಿ ನಡೆದ ಸೌತ್ ಇಂಡಿಯಾ ಮುಕ್ತ ಕರಾಟೆ ಚಾಂಪಿಯನ್ ಶಿಪ್’ನಲ್ಲಿ ನಗರದ ದಾಂಡೇಲಿ ಕರಾಟೆ ಕ್ಲಬ್ ಹಾಗೂ ಕ್ಲಾಸಸ್ ನ 11 ವಿದ್ಯಾರ್ಥಿಗಳು ಭಾಗವಹಿಸಿ ಕುಮಿಟೆ ( ಪೈಟ್) ಹಾಗೂ ಕಟಾ ವಿಭಾಗದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದು ನಗರಕ್ಕೆ ಕೀರ್ತಿಯನ್ನು ತಂದಿದ್ದಾರೆ.

ಚಾಂಪಿಯನ್ ಶಿಪ್’ ನಲ್ಲಿ ಕ್ರಮವಾಗಿ ಸುಪ್ರಿಯಾ ತಲಪಾಟಿ, ನಿಖಿಲ್ ಪಾಟೀಲ,ಇಕ್ರಾ ಜಂಬಗಿ, ಅಭಿನವ ಗುಲಗಂಜಿ, ಜೈನಬ ಮುಕಾಶಿ, ಬದ್ರಿಯಾ ಮುಕಾಶಿ,ತರುಣ್ ಜಾದವ್, ರನವಿತಾ ಹಲಗೇಕರ, ಪ್ರಣವ ಸೌದತ್ತಿ, ಮಲಿಕ್ ಕಿತ್ತೂರು, ಜೈಯದ್ ಜಂಬಗಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು.

ಕರಾಟೆ ಶಿಕ್ಷಕರಾದ ಯಾಕುಬ್ ಶೇಖ, ರಿಯಾಜ್ ಬಿಡಿಕರ ಅವರು ಈ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಿದ್ದಾರೆ.