ದಾಂಡೇಲಿ : ನಗರದ ಸುಭಾಷ್ ನಗರದಲ್ಲಿರುವ ಶ್ರೀ.ಪ್ರಸನ್ನ ಆಂಜನೇಯ ದೇವಸ್ಥಾನದಲ್ಲಿ ಶ್ರೀ.ಪ್ರಸನ್ನ ಆಂಜನೇಯ ಯುವಕ ಮಂಡಳದ ಆಶ್ರಯದಡಿ ಹನುಮಾನ್ ಮಾಲಾಧಾರಣೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿವರ್ಷದಂತೆ ಈ ವರ್ಷವೂ ಹನುಮಾನ್ ಮಾಲಾ ಧಾರಣೆ ಹಾಗೂ ಪೂಜಾ ಕಾರ್ಯಕ್ರಮವು ದಿನೇಶ್ ಮಹಾರಾಜ್ ಅವರ ಪೌರೋಹಿತ್ಯದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿತು.
ಈ ಸಂದರ್ಭದಲ್ಲಿ ಶ್ರೀ ಪ್ರಸನ್ನ ಆಂಜನೇಯ ಯುವಕ ಮಂಡಳದ ಸಚಿನ್ ದೊನವಾಡೆ, ಮಂಜುನಾಥ ಜುವೇಕಕ್, ವೈಭವ್ ಭಜಂತ್ರಿ, ಗುರುಪ್ರಸಾದ ಸುಳ್ಳದ, ದಯಾ, ಶರಣ್, ರೋಹನ್, ಸಂಪತ್, ಸುನೀಲ್, ಬಸವರಾಜ್, ಪುನೀತ್, ರೋಹಿತ್ ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು