ದಾಂಡೇಲಿ : ಅದು ದಟ್ಟ ಕಾಡಿನ ನಡುವೆಯಿರುವ ರಸ್ತೆಯದು. ದಾಂಡೇಲಿಯಿಂದ ಗಣೇಶಗುಡಿಗೆ ಸಂಪರ್ಕ ಬೆಳೆಸುವ ರಸ್ತೆಯೂ ಹೌದು. ಅದುವೆ ಬರ್ಚಿ ರಸ್ತೆ. ಈ ರಸ್ತೆಯಲ್ಲಿ ಕಾಡುಪ್ರಾಣಿಗಳಾದ ಜಿಂಕೆ, ನವಿಲು, ಕಾಡುಕೋಣ,ಕಾಡೆಮ್ಮೆ ಮೊದಲಾದ ಪ್ರಾಣಿಗಳು ಸಾಮಾನ್ಯವಾಗಿ ಕಾಣಿಸಿತ್ತದೆ. ಆಗೊಮ್ಮೆ ಈಗೊಮ್ಮೆ ಎಂಬಂತೆ ಆನೆ ಕೂಡ ದರ್ಶನ ಭಾಗ್ಯವನ್ನು ನೀಡುತ್ತದೆ. ಅಂದಹಾಗೆ ಬುಧವಾರ ಬರ್ಚಿ ರಸ್ತೆಯ ಬದಿಯಲ್ಲಿ ಒಂಟಿಸಲಗವೊಂದು ದರ್ಶನವನ್ನು ನೀಡಿದೆ.
ಬೃಹತ್ ಗಾತ್ರದ ಗಜರಾಜನನ್ನು ನೋಡಿದ ಪ್ರಯಾಣಿಕರು ಒಮ್ಮೆ ಭಯಪಟ್ಟರಾದರೂ, ಆನೆಯ ಮೌನ ಪ್ರತಿಕ್ರಿಯೆಗೆ ಆಶ್ಚರ್ಯಚಕಿತರಾದರು.