ಹಳಿಯಾಳ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ಹಳಿಯಾಳದಲ್ಲಿ ಹಳೆಯ ಶಿಬಿರಾರ್ಥಿಗಳ ಆಶ್ರಯ ಸಂಘದ ವಾರ್ಷಿಕ ಮಹಾಸಭೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,
ಈ ಕಾರ್ಯಕ್ರಮದಲ್ಲಿ ಸಂಸ್ಥೆಯಿಂದ ತರಬೇತಿ ಪಡೆದು ಹೋಗಿ ಉದ್ಯಮ ಸ್ಥಾಪಿಸಿ ಯಶಸ್ವಿ ಪೂರ್ಣ ಉದ್ಯಮಶೀಲರಾಗಿ ಬೆಳೆದು ವ್ಯಕ್ತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು,
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಂಸ್ಥೆಯ ಧರ್ಮದರ್ಶಿ ಪ್ರಸಾದ್ ದೇಶಪಾಂಡೆ ಅವರು ನಮ್ಮ ದೇಶ ಸಾಕಷ್ಟು ಮುಂದುವರೆಯುತ್ತಿದೆ. ಇದರ ಭಾಗವಾಗಿ ಎಲ್ಲರೂ ಉತ್ತಮ ಕೌಶಲ್ಯವನ್ನು ಹೊಂದಿ ದೇಶಕ್ಕೆ ಕೊಡುಗೆ ಕೊಡುವುದು ಅವಶ್ಯಕತೆ ಇದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ಕಳೆದ 20 ವರ್ಷದಿಂದ ಕಾರ್ಯನಿರ್ವಹಿಸುತ್ತಾ ಬಂದಿದೆ ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯಕಾರಣಿ ಮಂಡಳಿಯ ಸದಸ್ಯರಾದ ಶ್ಯಾಮ್ ಕಾಮತ್ ಅವರು ಮಾತನಾಡಿ ಎಲ್ಲಾ ಹಳೆಯ ಶಿಬಿರಾರ್ಥಿಗಳು ನಮ್ಮ ಸಂಸ್ಥೆಯ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಬೇಕು. ನಿಮ್ಮಿಂದ ತರಬೇತಿಯ ಉಪಯೋಗ ಬೇರೆಯವರಿಗೂ ತಲುಪಬೇಕು ಎಂದು ತಿಳಿಸಿದರು.
ಕಾರ್ಪೊರೇಷನ್ ಬ್ಯಾಂಕಿನ ನಿವೃತ್ತ ಎಲ್.ಡಿ.ಎಂ ಆಗಿರುವ ಆರ್.ಕೆ.ಬಾಲಚಂದ್ರ ಅವರು ಮಾತನಾಡಿ ವ್ಯಕ್ತಿ ಪ್ರತಿ ನಿತ್ಯ ತನ್ನ ಜ್ಞಾನವನ್ನು ವೃದ್ಧಿ ಮಾಡಿಕೊಳ್ಳುತ್ತಾ ಕ್ರಿಯಾಶೀಲ ವ್ಯಕ್ತಿಯಾಗಿ ಬೆಳೆಯಬೇಕೆಂದರು.
ಮಹೇಶ್ ಪಿಯು ಕಾಲೇಜಿನ ಉಪನ್ಯಾಸಕರಾದ ಸುರೇಶ್ ಬೊಮ್ಮಿಗಟ್ಟಿ ಸಂದರ್ಭೋಚಿತವಾಗಿ ಮಾತನಾಡಿದರು.
ಸಂಸ್ಥೆಯ ಹಿರಿಯ ಸಲಹೆಗಾರರಾದ ಅನಂತಯ್ಯ ಆಚಾರ್ ಅವರು ಆಸರೆ ಸಂಘದ ಉದ್ದೇಶವನ್ನು ವಿವರಿಸಿ, ತನ್ನೊಂದಿಗೆ ಇನ್ನಿತರ ನಿರುದ್ಯೋಗಿ ಯುವ ಜನತೆಯನ್ನು ಸ್ವಾವಲಂಬಿಗಳನ್ನಾಗಿಸುವ ಮಹತ್ವದ ಉದ್ದೇಶ ಆಸರೆ ಸಂಘಟನೆಯದ್ದಾಗಿದೆ ಎಂದರು.
ಈ ಸಂದರ್ಭದಲ್ಲಿ ಆಸರೆ ಸಂಘದ ನೂತನ ಅಧ್ಯಕ್ಷರಾದ ಶಿವಾ ಭಾಗವಾಡಕರ್, ಉಪಾಧ್ಯಕ್ಷರಾದ ಭಿಮಾನಂದ ಚೌಗಲಾ ಮತ್ತು ಅನೀಸ ಶಿಲ್ಲೇದಾರ, ಸಂಸ್ಥೆಯ ನಿರ್ದೇಶಕರಾದ ಪ್ರಶಾಂತ ಬಡ್ಡಿ , ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಹಳೆಯ ಶಿಬಿರಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು