ಫುಟ್ಬಾಲ್ ಮತ್ತು ಕಬಡ್ಡಿ ಸ್ಪರ್ಧೆಯಲ್ಲಿ ಹಳಿಯಾಳ ಪಟ್ಟಣದ ವಿ.ಡಿ ಹೆಗಡೆ ಕಾಲೇಜಿನ ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆ

ಹಳಿಯಾಳ‌ : 2023 – 24ನೇ ಸಾಲಿನ ಉತ್ತರಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಫುಟ್ಬಾಲ್ ಮತ್ತು ಕಬಡ್ಡಿ ಕ್ರೀಡಾಕೂಟದಲ್ಲಿ ಹಳಿಯಾಳ ಪಟ್ಟಣದ ವಿ. ಡಿ. ಹೆಗಡೆ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ತೋರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ತಾಲೂಕಿಗೆ ಕೀರ್ತಿಯನ್ನು ತಂದಿದ್ದಾರೆ.

ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಾದ ಸುವರ್ಣ ಮಗರ್ , ರೂಪಾ ಗೌಡಾ, ಸ್ವಾತಿ ಉಪ್ಪಾರ, ದೇವಕ್ಕ ಹುಂದ್ರಿ ಹಾಗೂ ಕಬಡ್ಡಿಯಲ್ಲಿ ಪ್ರತಿಕಾ ದೇಸುರಕರ, ಸಾನಿಯಾ ಗೌಡಾ, ಸ್ನೇಹಾ ಕಲಾಲ್ ಇವರು ಅತ್ಯುತ್ತಮ ಪ್ರದರ್ಶನವನ್ನು ನೀಡಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಈ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾರ ವಿ.ಡಿ ಹೆಗಡೆ & ಕಾರ್ಯಾಧ್ಯಕ್ಷರಾದ ಸುನಿಲ ಹೆಗಡೆ ಹಾಗೂ ಆಡಳಿತ ಮಂಡಳಿಯ ಶ್ರೀಪತಿ ಭಟ್, ನಿತಿನ್ ದೇಶಪಾಂಡೆ , ಉದಯ ಹೂಲಿ ಮತ್ತು ಸದಸ್ಯ ವರ್ಗ, ಪ್ರಾಚಾರ್ಯರು ಹಾಗೂ ಉಪನ್ಯಾಸಕರ ವೃಂದ ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.