ಹಳಿಯಾಳ : ರಾಜ್ಯ ಸರ್ಕಾರ ನೂತನವಾಗಿ ಹೊರಡಿಸಿರುವ ಆದೇಶದಲ್ಲಿ ದಾಂಡೇಲಿ ತಾಲೂಕನ್ನು ಕೂಡ ಸಾಧಾರಣ ಬರಗಾಲ ಪೀಡಿತ ತಾಲ್ಲೂಕನ್ನಾಗಿ ಘೋಷಣೆ ಮಾಡಲಾಗಿದೆ ಎಂದು ಹಳಿಯಾಳ ಪಟ್ಟಣದಲ್ಲಿರುವ ಶಾಸಕರ ಕಾರ್ಯಾಲಯವು ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿದೆ.
ಈ ಬಾರಿ ಅತ್ಯಧಿಕ ಕಡಿಮೆ ಪ್ರಮಾಣದಲ್ಲಿ ಮಳೆ ಬಂದ ಹಿನ್ನೆಲೆಯಲ್ಲಿ ದಾಂಡೇಲಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳಿಗೆ ತೀವ್ರ ಹಾನಿಯಾಗಿದೆ. ಇವೆಲ್ಲವುಗಳನ್ನು ಗಮನಿಸಿರುವ ಶಾಸಕರಾದ ಆರ್ ವಿ ದೇಶಪಾಂಡೆ ಅವರು ಸರಕಾರದ ಗಮನವನ್ನು ಸೆಳೆದಿದ್ದರು.
ರಾಜ್ಯ ಸರ್ಕಾರ ಘೋಷಣೆ ಮಾಡಿದ ಸಾಧಾರಣ ಬರಗಾಲ ಪೀಡಿತ 21 ತಾಲೂಕುಗಳ ಯಾದಿಯಲ್ಲಿ ದಾಂಡೇಲಿಯನ್ನು ಕೂಡ ಸಾಧಾರಣ ಬರಗಾಲ ಪೀಡಿತ ತಾಲೂಕೆಂದು ಘೋಷಣೆ ಮಾಡಿದೆ ಎಂದು ಮಾಧ್ಯಮಕ್ಕೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ