ಹೊನ್ನಾವರದ ಹವ್ಯಕ ಸಭಾಭವನದಲ್ಲಿ ಹವ್ಯಕ ಟ್ರಸ್ಟ್‌ನ ಅಧ್ಯಕ್ಷರಾದ ಡಾ.ಯುಕೆ ಅವಧಾನಿಯವರಿಗೆ ಶ್ರದ್ಧಾಂಜಲಿ

ಹೊನ್ನಾವರ :- ಹೊನ್ನಾವರದ ಹವ್ಯಕ ಸಭಾಭವನದಲ್ಲಿ ಹವ್ಯಕ ಟ್ರಸ್ಟ್‌ನ ಅಧ್ಯಕ್ಷರು, ಹಾಗೂ ವೈದ್ಯರಾದ ಡಾ. ಯುಕೆ ಅವಧಾನಿಯವರಿಗೆ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು..

ಡಾ. ಅವಧಾನಿಯವರು ಹವ್ಯಕ ಟ್ರಸ್ಟ್‌ನಲ್ಲಿ ಟ್ರಸ್ಟಿಯಾಗಿ 5 ವರ್ಷ ಹಾಗೂ ಅಧ್ಯಕ್ಷರಾಗಿ 2 ವರ್ಷ ಕಾರ್ಯ ನಿರ್ವಹಿಸಿದ್ರು. ಅದಕ್ಕಿಂತ ಹೆಚ್ಚಾಗಿ ಕರ್ಕಿ ಊರಿನ ಜನಸಾಮಾನ್ಯರ ಡಾಕ್ಟರ್ ಎಂದು ಪ್ರಸಿದ್ಧಿ ಪಡೆದಿದ್ರು. ಕರ್ಕಿ ಊರಿನ ಜನ ಸೇರಿ ಶ್ರದ್ಧಾಂಜಲಿ ಸಭೆಯನ್ನುಆಯೋಜಿಸಿದ್ರು.

ಅವಧಾನಿ ಡಾಕ್ಟರ್ ಬಗ್ಗೆ ಮಾತನಾಡಿದ ಅವರ ಅಭಿಮಾನಿಗಳು, ವೈದ್ಯರಾಗಿ ಅವರು ನೀಡುತ್ತಿದ್ದ ಸೇವೆಯ ಬಗ್ಗೆ ಗುಣಗಾನವನ್ನು ಮಾಡಿದ್ರು. ಅವಧಾನಿ ಡಾಕ್ಟರ್ ನಮ್ಮೊಂದಿಗಿಲ್ಲ. ಅವರ ಅಭಿಮಾನಿಗಳು ಅವರನ್ನು ಈ ವೇಳೆ ನೆನಪು ಮಾಡಿಕೊಂಡರು. ಚೆನ್ನಕೇಶವ ಶಾಲೆಯ ಜೊತೆಯು ಉತ್ತಮ ಸಂಬಂಧವನ್ನು ಹೊಂದಿದ್ದರು. ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ರು.

ಪ್ರೌಢಶಾಲೆಯ ಜಾಗ ರಾಷ್ಟ್ರೀಯ ಹೆದ್ದಾರಿಗೆ ಹೋಗಬಹುದು ಅನ್ನುವ ಕಾರಣಕ್ಕೆ ಅವಧಾನಿಯವರು ಕರ್ಕಿಯ ಸಮೀಪದಲ್ಲಿಯೇ 3 ಎಕರೆ ಜಾಗವನ್ನು ಸಹ ತೆಗೆದುಕೊಂಡಿಟ್ಟುಕೊಂಡಿದ್ದಾರೆ. ಅವರು ನಮಗೆ ಉತ್ತಮ ಮಾರ್ಗದರ್ಶಕರಾಗಿದ್ದರು ಎಂದು ಚೆನ್ನಕೇಶವ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಕ ಎಲ್. ಎಂ.ಹೆಗಡೆ ಹೇಳಿದ್ರು..

ಉಮೆಶ್.ಕೆ ಅವಧಾನಿಯವರು ಇಲ್ಲದೆ ಕರ್ಕಿ ಬಡವಾಗಿದೆ. ಅವರಂತಹ ಡಾಕ್ಟರ್ ಹುಟ್ಟಿಬರಲು ಸಾಧ್ಯವೇ ಇಲ್ಲ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಅವರ ಅಭಿಮಾನಿಗಳು , ಕರ್ಕಿ ಊರ ನಾಗರಿಕರು ನಮನ ಸಲ್ಲಿಸಿದ್ರು. ಈ ಶ್ರದ್ಧಾಂಜಲಿ ಸಭೆಯಲ್ಲಿ ಹವ್ಯಕ ಟ್ರಸ್ಟ್‌ನ ಕಾರ್ಯದರ್ಶಿ ಐ.ವಿ.ಜೋಷಿ ,ಖಜಾಂಚಿ ಎಲ್.ಐ.ಭಟ್ , ಹಾಗೂ ಅವಧಾನಿಯವರ ಪುತ್ರಿಯರು ಹಾಗೂ ಅಳಿಯ, ಎಸ್.ಆರ್.ಹೆಗಡೆ ಇತರರು ಭಾಗವಹಿಸಿ ಶ್ರದ್ದಾಂಜಲಿ ಸಲ್ಲಿಸಿದ್ರು..
ಪ್ಲೋ..ಎಂಡ್…

ನಾಗರಾಜ ನಾಯ್ಕ ನುಡಿಸಿರಿ ನ್ಯೂಸ್‌, ಹೊನ್ನಾವರ