ಹೊನ್ನಾವರದಲ್ಲಿ ವಿದ್ಯಾನಿಧಿ ಯೋಜನೆಯಡಿ ಕೊಂಕಣ ಖಾರ್ವಿ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಹೊನ್ನಾವರ :- ಹೊನ್ನಾವರದ ದಂಡಿನ ದುರ್ಗಾದೇವಿ ಸಭಾಭವನದಲ್ಲಿ ಕೊಂಕಣ ಖಾರ್ವಿ ಸಮಾಜ ಹೊನ್ನಾವರ ವತಿಯಿಂದ ವಿದ್ಯಾನಿಧಿ ಯೋಜನೆಯಡಿ ಕೊಂಕಣ ಖಾರ್ವಿ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು..

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಯದೇವ ಇನ್‌ಸ್ಟಿಟ್ಯೂಟ್ ಡಾ. ಭರತರಾಜ ಬಾನಾವಳಿಕರ್, ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಿರುವ ಸಂಘಟಕರ ಕಾರ್ಯ ಶ್ಲಾಘನೀಯ. ಇದ್ರಿಂದ ಇನ್ನಷ್ಟೂ ಪ್ರತಿಭೆಗಳಿಗೆ ಪ್ರೇರಣೆಯಾಗುತ್ತದೆ. ವಿದ್ಯಾರ್ಥಿಗಳು ಎಸ್ಸೆಸೆಲ್ಸಿಯಲ್ಲಿ ಇರುವಾಗಲೇ ಮುಂದಿನ ಶೈಕ್ಷಣಿಕ ಹಂತದ ಬಗ್ಗೆ ನಿರ್ಧರಿಸಿರಬೇಕು. ಓದಿನ ಜೊತೆಗೆ ಪೂರ್ವ ತಯಾರಿ ಕೂಡ ಅಗತ್ಯವಾಗಿರುತ್ತದೆ. ಇಂದಿನ ಅಂತರ್ಜಾಲಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ರು..

ಎಸ್. ಡಿ .ಎಮ್ ಕಾಲೇಜಿನ ಉಪನ್ಯಾಸಕಿ ಕಾವೇರಿ ಮೇಸ್ತ ಮಾತನಾಡಿ, ಅಂಕಗಳಿಕೆಯಲ್ಲಿ ಹೆಚ್ಚು ಕಡಿಮೆ ಅನ್ನೋ ವಿಚಾರದಲ್ಲಿ ನಿಮ್ಮನ್ನು ನೀವು ಬೇರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಡಿ. ತಂದೆ-ತಾಯಿಯನ್ನು ಗೌರವಿಸಿ. ಸರಿ ಇದ್ದದನ್ನು ಸರಿ ಎನ್ನಬೇಕು. ತಪ್ಪಿದ್ದಾಗ ಅದನ್ನು ಬೆಂಬಲಿಸಬೇಡಿ ಎಂದು ಹೇಳಿದ್ರು..

ಎಸ್ಸೆಸೆಲ್ಸಿಯಲ್ಲಿ ಸಾಧನೆಗೈದ 11 , ಪಿಯುಸಿಯಲ್ಲಿನ 17, ಪದವಿ ವ್ಯಾಸಂಗದಲ್ಲಿನ 5 ಒಟ್ಟು 33 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 1ಲಕ್ಷ.60 ಸಾವಿರ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಿ ಪುರಸ್ಕರಿಸಿಲಾಯ್ತು. ವಿದ್ಯಾನಿಧಿ ಯೋಜನೆಗೆ ಆರ್ಥಿಕ ಸಹಾಯಧನ ನೀಡಿದ ದಾನಿಗಳಿಗೆ ಪುಷ್ಪ ನೀಡಿ ಅಭಿನಂದಿಸಲಾಯ್ತ. ಈ ವೇಳೆ ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡ್ರು..

ಕೊಂಕಣ ಖಾರ್ವಿ ಸಮಾಜದ ಅಧ್ಯಕ್ಷ ಸೂರ್ಯಕಾಂತ ಸಾರಂಗ ಮಾತನಾಡಿ, ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸಲು ಸಮಾಜ ಬಂಧುಗಳ ಹೊರತುಪಡಿಸಿ ಬೇರೆ ಯಾರಿಂದಲು ಸಹಾಯ ಪಡೆದಿಲ್ಲ. ದಾನಿಗಳು ನೀಡುವ ಪ್ರತಿಯೊಂದು ಹಣ ಸನ್ಮಾನ ಪಡೆಯುವ ವಿದ್ಯಾರ್ಥಿಗಳಿಗೆ ಸಂದಾಯವಾಗುತ್ತದೆ‌. 2014-15 ರಿಂದ ಪ್ರಾರಂಭವಾದ ಈ ಯೋಜನೆಯಲ್ಲಿಇದುವರೆಗೆ 229 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ ಎಂದರು.

ಈ ವೇಳೆ ಕಾರ್ಯಕ್ರಮದಲ್ಲಿ ಕೊಂಕಣ ಖಾರ್ವಿ ಸಮಾಜದ ಗೌರವಾಧ್ಯಕ್ಷ ಎ.ಎನ್ ಮೇಸ್ತ, ಕಾರ್ಯದರ್ಶಿ ಸಂದೀಪ ತಾಂಡೇಲ್ ಖಾರ್ವಿ ಸಮಾಜದ ಮುಖಂಡರುಗಳು, ಸಾಧಕ ವಿದ್ಯಾರ್ಥಿಗಳ ಪಾಲಕ-ಪೋಷಕರು ಹಾಗೂ ಇತರರು ಉಪಸ್ಥಿತರಿದ್ರು..

ನಾಗರಾಜ ನಾಯ್ಕ ನುಡಿಸಿರಿ ನ್ಯೂಸ್‌, ಹೊನ್ನಾವರ