ಶೈಕ್ಷಣಿಕ ಕ್ಷೇತ ಸದಢೃಗೊಂಡಲ್ಲಿ ಬಲಿಷ್ಟ ರಾಷ್ಟ್ರ ನಿರ್ಮಾಣ ಸಾಧ್ಯ : ಶೈಲೇಶ್ ಪರಮಾನಂದ

ದಾಂಡೇಲಿ : ಇಂದು ಎಲ್ಲದಕ್ಕೂ ಶಿಕ್ಷಣವೆ ಮೂಲ. ಆ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಶೈಕ್ಷಣಿಕ ಕ್ಷೇತ್ರ ಸದೃಢಗೊಂಡಲ್ಲಿ ಬಲಿಷ್ಟ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರು ಹೇಳಿದರು.

ಅವರು ನಗರದ ಸೆಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಹಿ.ಪ್ರಾ. ಶಾಲೆಯಲ್ಲಿ ಬೆಥನಿ ಶಿಕ್ಷಣ ಸಂಸ್ಥೆಯ ಪ್ಲಾಟೀನಂ ವಷರ್ಾಚರಣೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡುತ್ತಿದ್ದರು. ದೇಶವ್ಯಾಪಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ಶಿಕ್ಷಣ ಸೇವೆ ನೀಡುತ್ತಿರುವ ಬೆಥನಿ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸೇವಾ ಕೈಂಕರ್ಯ ಅತ್ಯಂತ ಶ್ಲಾಘನೀಯವಾಗಿದೆ. ಶಿಸ್ತು ಮತ್ತು ಬಧ್ಧತೆಯಿಂದ ಬೆಥನಿ ಶಿಕ್ಷಣ ಸಂಸ್ಥೆ ಶಿಕ್ಷಣದ ದಾಸೋಹದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಈ ಸಾಧನೆ ನಿತ್ಯ ನಿರಂತರವಾಗಿ ಮುಂದುವರಿಯಲಿ ಎಂದು ಕಾರ್ಯಕ್ರಮಕ್ಕೆ ಶುಭ ಕೋರಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರು ಸೆಂಟ್ ಮೈಕಲ್ ಕಾನ್ವೆಂಟ್ ಶಾಲೆ ಶಿಸ್ತು ಮತ್ತು ಅತ್ಯುತ್ತಮ ಕಲಿಕೆಗೆ ಹೆಸರುವಾಸಿಯಾದ ಸಂಸ್ಥೆಯಾಗಿದ್ದು, ಇದು ದಾಂಡೇಲಿಗೆ ಹ್ಮೆಮ ಎಂದರು.

ಮುಖ್ಯ ಅತಿಥಿಗಳಾಗಿ ಪಾಲಕರ ಸಂಘದ ಉಪಾಧ್ಯಕ್ಷ ಎಸ್.ಪ್ರಕಾಶ್ ಶೆಟ್ಟಿ, ನಗರ ಸಭಾ ಸದಸ್ಯರಾದ ನರೇಂದ್ರ ಚೌವ್ಹಾಣ್, ಹಳೆದಾಂಡೇಲಿ ಚರ್ಚಿನ ಧರ್ಮಗುರುಗಳಾದ ಫಾ: ಮಾರ್ಕ್ ಫರ್ನಾಂಡೀಸ್, ಸಿ.ಆರ್.ಪಿ ಲಲಿತಾ ನಾಯ್ಕ ಯವರು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ದಕ್ಷಿಣ ಆಪ್ರಿಕಾದಲ್ಲಿ ಉನ್ನತ ಉದ್ಯೋಗದಲ್ಲಿರುವ ಅಶೀಸ್ ಮಂಡೋನ್ಸಾ ಅವರು ವಹಿಸಿದ್ದರು.

ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಯಿನಿ ಸಿಸ್ಟರ್ ಕ್ಲಾರೆಟ್, ಶಾಲಾ ಅಧೀಕ್ಷಕಿ ಸಿಸ್ಟರ್ ವೀಣಾ, ಶಾಲಾ ಮುಖ್ಯ ಶಿಕ್ಷಕಿ ವಿನಿತಾ ಡಯಾಸ್ ಉಪಸ್ಥಿತರಿದ್ದರು.