ಗಣೇಶೋತ್ಸವದ ಸಿದ್ಧತೆಯಲ್ಲಿ ತೊಡಗಿಕೊಂಡ ಸಾರ್ವಜನಿಕ ಗಣೇಶ ಮಂಡಳಗಳು

ದಾಂಡೇಲಿ : ನಗರದಲ್ಲಿ ಎಲ್ಲಾ ಧರ್ಮಿಯರ ಅತ್ಯಂತ ಇಷ್ಟದ ಹಬ್ಬಗಳಲ್ಲಿ ಚೌತಿ ಹಬ್ಬವು ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ನಗರದಲ್ಲಿ ಬಹುತೇಕ ಕಡೆಗಳಲ್ಲಿ ಎಲ್ಲಾ ಧರ್ಮಿಯರು ಸೇರಿ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವುದು ಪರಸ್ಪರ ಸೌಹಾರ್ದತೆಯ ಸಂಕೇತವಾಗಿದೆ.
ಅಂದ ಹಾಗೆ ದಾಂಡೇಲಿ ನಗರದ ಒಟ್ಟು 51 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಆಯೋಜನೆ ಮಾಡಲಾಗುತ್ತಿದೆ. ಸೆ:19 ರಂದು ಚೌತಿ ಹಬ್ಬ ಆರಂಭವಾಗಿರುವ ಹಿನ್ನಲೆಯಲ್ಲಿ ನಗರದಲ್ಲೆಡೆ ಸಾರ್ವಜನಿಕ ಗಣೇಶ ಮಂಡಳಗಳು ಪೆಂಡಲ್ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿವೆ.