ಸರಕಾರದ ಸೌಲಭ್ಯ ಪಡೆಯಲು ವಂಚಿತರಾಗುತ್ತಿರುವ ಹೆಬ್ಬೆಟ್ಟು ಬೆರಳು ಸವಕಳಿಯಾದವರು : ಪರ್ಯಾಯ ಕ್ರಮಕ್ಕೆ ಮನವಿ

ದಾಂಡೇಲಿ : ಇಂದು ಸರಕಾರದ ಬಹುತೇಕ ಸೌಲಭ್ಯಗಳನ್ನು ಪಡೆಯಲು ಹೆಬ್ಬೆಟ್ಟು ಅತೀ ಅಗತ್ಯವಾಗಿ ಬೇಕಾಗಿದೆ. ಆದರೆ ರೈತಾಪಿ ಜನರ, ಕೂಲಿ ಕಾರ್ಮಿಕರ ಮತ್ತು ವಯಸ್ಸಾದವರ ಹೆಬ್ಬೆಟ್ಟು ಬೆರಳು ಸವಕಳಿಯಾಗಿರುವುದರಿಂದ ಆಧಾರ್ ಕಾರ್ಡ್ ಜೋಡಣೆಯಿಂದ ಹಿಡಿದು ಪಡಿತರ ಹೀಗೆ ಇನ್ನಿತರ ಸರಕಾರದ ಬಹುತೇಕ ಸೌಲಭ್ಯಗಳನ್ನು ಪಡೆಯಲು ಕಷ್ಟಸಾಧ್ಯವಾಗುತ್ತಿದೆ. ಆದ್ದರಿಂದ ಹೆಬ್ಬೆಟ್ಟು ಬೆರಳು ಸವಕಳಿಯಾದವರಿಗೆ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ಪರ್ಯಾಯ ಕ್ರಮವನ್ನು ಕೈಗೊಳ್ಳಬೇಕೆಂದು ಕೈ ಬೆರಳು ಸವಕಳಿಯಾಗಿರುವ ದಾಂಡೇಲಿ ನಗರದ ಬೈಲುಪಾರ್ ನಿವಾಸಿ ಸಾರಾ ಕ್ರಿಸ್ತನಮ್ಮ ದೇವದಾಸ ದಾಸರಿ ಅವರು ದಾಂಡೇಲಿ ನಗರದಲ್ಲಿ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.