ಸತ್ಕಾರ್ಯಗಳ ಮೂಲಕ ಸದಾ ಅಮರರಾಗಿರಬೇಕು : ಪೂಜ್ಯ. ಶ್ರಿ.ಶಿವಲಿಂಗ ಮಹಾಸ್ವಾಮೀಜಿ ಕರೆ

ಹಳಿಯಾಳ‌ : ಹುಟ್ಟು, ಬದುಕು, ಸಾವಿನ ಈ ಮೂರು ದಿನದ ಬದುಕಿನಾಟದಲ್ಲಿ ನಾವು ನಮ್ಮ ಜೀವನದಲ್ಲಿ ಮಾಡಿದ ಸತ್ಕಾರ್ಯಗಳು ಸದಾ ಅಮರವಾಗಿರುತ್ತದೆ. ನಾವು ಬದುಕುವುದರ ಜೊತೆಗೆ ಇನ್ನೊಬ್ಬರ ಬದುಕಿಗೆ ಆಸರೆಯಾಗಿ ನಾವು ನಮ್ಮ ಬದುಕನ್ನು ರೂಪಿಸಿಕೊಂಡಾಗ ಮತ್ತು ಜೀವನದಲ್ಲಿ ಸತ್ಕಾರ್ಯಗಳನ್ನು ಮಾಡಿದಾಗ ಜೀವನದಲ್ಲಿ ನಿಜವಾದ ಸಾರ್ಥಕತೆಯನ್ನು ಪಡೆಯಲು ಸಾಧ್ಯ ಎಂದು ಶಿರಸಿಯ ಬಣ್ಣದ ಮಠದ ಪೂಜ್ಯಶ್ರೀ ಶಿವಲಿಂಗ ಮಹಾಸ್ವಾಮಿಜೀಯವರು ನುಡಿದರು.

ಅವರು ಹಳಿಯಾಳ ಪಟ್ಟಣದ ಶ್ರೀಗುರು ವಿರಕ್ತ ಮಠದಲ್ಲಿ ಆಯೋಜಿಸಲಾಗಿದ್ದ ಲಿಂಗೈಕ್ಯ ಬಿ.ಎಚ್ ದೇಸಾಯಿ ಸ್ವಾಮಿ ಮತ್ತು ಲಿಂಗೈಕ್ಯ ಶ್ರೀಕಾಂತ ಹೂಲಿಯವರ ಪುಣ್ಯ ಸ್ಮರಣೆ ವಿಶೇಷ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡುತ್ತಿದ್ದರು. ಶಿವಶರಣರು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆಯುವ ಮೂಲಕ ಸಂಸ್ಕಾರಯುತವಾದ ಸಮಾಜ ನಿರ್ಮಾಣ‌‌‌ ಮಾಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಳಿಯಾಳ ಪಟ್ಟಣದ ಗ್ರಾಮದೇವಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಮಂಗೇಶ್ ದೇಶಪಾಂಡೆಯವರು ಮಾತನಾಡಿ ಬಿ.ಎಚ್.ದೇಸಾಯಿ ಸ್ವಾಮಿ ಹಾಗೂ ಶ್ರೀಕಾಂತ ಹೂಲಿಯವರ ಆದರ್ಶ ಮತ್ತು ಜೀವನ ಸಂಸ್ಕಾರ ಹಾಗೂ ಹಳಿಯಾಳಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾ ಹಳಿಯಾಳ ತಾಲೂಕು ಘಟಕದ ಅಧ್ಯಕ್ಷರಾದ ಎಂ ಬಿ ತೋರಣಗಟ್ಟಿಯವರು ವಹಿಸಿದ್ದರು. 

ಕಾರ್ಯಕ್ರಮದಲ್ಲಿ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷರಾದ ಉದಯ್ ಹೂಲಿ, ಪ್ರಮುಖರಾದ ಶಿವ ದೇಸಾಯಿ ಸ್ವಾಮಿ, ಉಮೇಶ್ ಬೋಳಶೆಟ್ಟಿ, ರವಿ ತೋರಣಗಟ್ಟಿ ಹಾಗೂ ಸಮಾಜದ ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.