ಹೊನ್ನಾವರ ಪಟ್ಟಣದ ಸೆಂಟ್ ಥಾಮಸ್ ಪ್ರೌಢಶಾಲೆ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು…
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ.ಹನುಮಂತಪ್ಪ ಜ್ಯೊತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಈ ಸಂಘಟನೆ ಆರಂಭಗೊಳ್ಳಲು ಕಾರಣ, ಅದು ನಡೆದು ಬಂದ ಹಾದಿ, ಸಂಘಟನೆ ಮೂಲಕ ನಡೆದ ಹೋರಾಟಗಳು, ಪಿಂಚಣಿ ಪಡೆಯುವಲ್ಲಿ ಇರುವ ತೊಡಕುಗಳ ಕುರಿತು ಅಂಕಿ ಅಂಶಗಳ ಸಹಿತ ಮಾಹಿತಿ ನೀಡಿದರು…
ಅತಿಥಿಗಾಗಿ ರಾಜ್ಯ ಸಹ ಸಂಚಾಲಕ ಮಂಜುನಾಥ ಭತ್ತದ, ಜಿಲ್ಲಾ ಅಧ್ಯಕ್ಷ ಉಮೇಶ ಭಟ್ಟ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾರುತಿ ನಾಯಕ, ಮುಖ್ಯಾಧ್ಯಾಪಕರ ಸಂಘದ ಜಿಲ್ಲಾಧ್ಯಕ್ಷ ಎಲ್. ಎಮ್ ಹೆಗಡೆ, ಶಿರಸಿ ತಾಲೂಕಿನ ಸಂಚಾಲಕ ರಾಜಶೇಖರ್ ಎಮ್, ಎಸ್.ಡಿ.ಎಮ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಮ್.ಹೆಚ್.ಭಟ್, ವಿವಿಧ ಶಿಕ್ಷಕರ ಸಂಘದ ಪಧಾಧಿಕಾರಿಗಳಾದ ಮಹೇಶ ಶೆಟ್ಟಿ, ಎಮ್.ಹೆಚ್. ಸಂತೋಷಕುಮಾರ, ಎಮ್.ಹೆಚ್.ನಾಯ್ಕ , ಎಸ್.ಎಸ್.ಪೂಜಾರ, ವಿಜಯಲಕ್ಷ್ಮೀ ಭಟ್ಟ, ರಾಮಚಂದ್ರ ಮಡಿವಾಳ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ತಾಲೂಕು ಅಧ್ಯಕ್ಷ ಚಂದ್ರಪ್ಪ ಹೆಚ್. ಅಣ್ಣಪ್ಪನವರ್ ವಹಿಸಿದ್ದರು. ಹೊನ್ನಾವರ ತಾಲೂಕಿನ ಹಾಗೂ ಜಿಲ್ಲೆಯ ಬಹಳಷ್ಟು ಪಿಂಚಣಿ ವಂಚಿತ ಶಿಕ್ಷಕರು ಭಾಗವಹಿಸಿ ಮುಂದಿನ ಹೋರಾಟಗಳಿಗೆ ಅಭೂತಪೂರ್ವ ಬೆಂಬಲ ಸೂಚಿಸಿದರು…