1 ಕ್ವಿಂಟಾಲ್ ಗೂ ಹೆಚ್ಚು ಭಾರವಿದ್ದ ಹೆಬ್ಬಾವಿನ ರಕ್ಷಣೆ.! ಹಾವು ಸೆರೆ ಸಿಕ್ಕಿದ್ದೆಲ್ಲಿ,? ಕಾರ್ಯಾಚರಣೆ ಹೇಗಿತ್ತು ಗೊತ್ತಾ.?

ಕಾರವಾರ: ನಗರದ ನಂದನಗದ್ದಾದಲ್ಲಿ ಗುರುವಾರ ಬೃಹತ್ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತ್ತು. ನಗರದ ನಂದನಗದ್ದಾದ ಪಟೇಲ್ ವಾಡಾದಲ್ಲಿ ಸುಮಾರು 10 ಅಡಿಗಿಂತಲೂ ಉದ್ದವಾದ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿದೆ. ಇದನ್ನು ಗಮನಿಸಿದ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದ್ದು ತಕ್ಷಣ ಉರಗ ಪ್ರೇಮಿ ಮುರಾದ್ ಅವರಿಗೆ ವಿಷಯ ಮುಟ್ಟಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಮುರಾದ್ ಅವರು ಸ್ಥಳೀಯರ ನೆರವಿನೊಂದಿಗೆ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ರಕ್ಷಿಸಿದ್ದಾರೆ. ಸುಮಾರು 1 ಕ್ವಿಂಟಾಲ್ ಗಿಂತಲೂ ಹೆಚ್ಚು ಭಾರವಿದ್ದ ಈ ಹೆಬ್ಬಾವನ್ನು ನೋಡಲು ಸುತ್ತಮುತ್ತಲಿನ ನೂರಾರು ಮಂದಿ ಸೇರಿದ್ದರು. ಬಳಿಕ ಹಿಡಿದ ಹೆಬ್ಬಾವನ್ನು ಮುರಾದ್ ಅವರು ಅರಣ್ಯ ಇಲಾಖೆಯ ನೆರವಿನೊಂದಿಗೆ ಸುರಕ್ಷಿತವಾಗಿ ಜನವಸತಿ ಇಲ್ಲದ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು.