ಡಾ. ಕಸ್ತೂರಿ ರಂಗನ್ ಅವರ ವರದಿ ಕಪೋಲಕಲ್ಪಿತ ಮತ್ತು ಅವೈಜ್ಞಾನಿಕವಾಗಿದೆ ಎಂದು ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ಉಪ್ಪೋಣಿ ಗ್ರಾಮ ಸಭೆಯಲ್ಲಿ ತೀವ್ರವಾದ ವಿರೋಧ ವ್ಯಕ್ತವಾಯ್ತು..
20 ವರ್ಷಗಳಷ್ಟು ಹಿಂದಿನ ಮತ್ತು ಹಸಿರಿನಿಂದ ಕೂಡಿದೆ ಎಂಬ ಏಕೈಕ ಕಾರಣಕ್ಕೆ ಸೆಟಲೈಟ್ ಚಿತ್ರಗಳ ಆಧಾರದಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿನ ಜನವಸತಿ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡಿ , ವಿವಿಧ ನಿರ್ಭಂದಗಳನ್ನು ಹೇರುವ ಡಾ. ಕಸ್ತೂರಿ ರಂಗನ್ ಅವರ ಕಪೋಲಕಲ್ಪಿತ, ಅವೈಜ್ಞಾನಿಕ ವರದಿ ಎಂದು ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ಗ್ರಾಮ ಸಭೆಯೊಂದರಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ರು..
ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕೆಂದು ಕೇಂದ್ರ ಸರ್ಕಾರವನ್ನು ಕೋರಲು ಗ್ರಾಮ ಸಭೆಯು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ.ಈ ಸಂಬಂಧ ಕೇಂದ್ರಕ್ಕೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಗ್ರಾಮ ಸಭೆ ತಿರ್ಮಾನಿಸಿದೆ.ಸಭೆ ಆರಂಭವಾಗ್ತಿದ್ದಂತೆ ಈ ಸಂಭಂದಲ್ಲಿ ಮಂಡನೆಯಾದ ಗೊತ್ತುವಳಿಯನ್ನು ಸಭಾಧ್ಯಕ್ಷ ಗಣೇಶ ಟಿ. ನಾಯ್ಕ ಅವರು ಚರ್ಚೆಗೆ ಸ್ವೀಕರಿಸಿದ್ರು…
ಮಾಲ್ಕೀ ಮತ್ತು ಅರಣ್ಯಭೂಮಿಯಲ್ಲಿ ಹೆಚ್ಚಿನ ಜನರು ಅಡಿಕೆ ಮತ್ತು ತೆಂಗಿನತೋಟಗಳನ್ನು ನಿರ್ಮಾಣ ಮಾಡಿದ್ದು ಈ ಪ್ರದೇಶ ಹಸಿರು ವಲಯದಂತೆ ಗೋಚರಿಸುತ್ತದೆ. ಉಪಗ್ರಹ ಆಧಾರಿತ ಚಿತ್ರಗಳಲ್ಲಿ ಈ ಪ್ರದೇಶ ಹಸಿರಿನಿಂದ ಕೂಡಿದೆ ಎನ್ನುವ ಏಕೈಕ ಕಾರಣಕ್ಕೆ ಈ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡಿ ಜನರ ಜನಜೀವನಕ್ಕೆ ಮಾರಕವಾಗಬಲ್ಲ ವಿವಿಧ ನಿರ್ಭಂದಗಳನ್ನು ಹೇರುವುದು ಸರಿಯಲ್ಲ ಎಂದು ಆರೋಪಿಸಿದ್ರು.
ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಪ್ರತಿ ಮಜರೆಗಳಲ್ಲಿ ಗ್ರಾಮ ಸಡಕ್ ರಸ್ತೆಗಳಿವೆ. ಶಾಲೆಗಳು, ಪದವಿ ಪೂರ್ವ ಕಾಲೇಜು, ಕೃಷಿ ಪತ್ತಿನ ಸಹಕಾರಿ ಸಂಘ. ಆರೋಗ್ಯ ಉಪಕೇಂದ್ರ, ಗ್ರಾಮ ಪಂಚಾಯತ, ವಿದ್ಯುತ್, ದೂರವಾಣಿ, ಮೊಬೈಲ್, ಇಂಟರ್‌ನೆಟ್, ಇತ್ಯಾದಿ ಮೂಲಭೂತ ಸೌಕರ್ಯವನ್ನು ಈ ಪ್ರದೇಶ ಹೊಂದಿದೆ. ಸಾರ್ವಜನಿಕರು ವಿವಿಧ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸಿ ಮಾಹಿತಿ ಪಡೆದ್ರು…
ಈ ವೇಳೆ ಗಣೇಶ ಟಿ. ನಾಯ್ಕ, ನೋಡಲ್ ಅಧಿಕಾರಿ ಸಹಾಯಕ ನಿರ್ದೇಶಕ ಕೃಷ್ಣಾನಂದ, ಗ್ರಾಮ ಪಂಚಾಯ್ತಿ ಸದಸ್ಯರಾದ ವಿನೋದ ನಾಯ್ಕ ಮಾವಿನಹೊಳೆ, ತಬ್ರೇಜ ಖಾನ, ಗಣೇಶ ಜಿ ನಾಯ್ಕ ಕೆಂಬಾಲ, ವಿಭಾ ಗಾಂವ್ಕರ, ಸುಲೋಚನಾ ಗೊಂಡ, ಗೀತಾ ನಾಯ್ಕ, ಇತರರು ಉಪಸ್ಥಿತರಿದ್ರು…