ಹೊನ್ನಾವರದ ತಾಲೂಕ ಪಂ. ಸಭಾಭವನದಲ್ಲಿ ಉ.ಕ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ


ಉತ್ತರ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳವನ್ನು ಈ ಬಾರಿ ಹೊನ್ನಾವರ ತಾಲೂಕಿನಲ್ಲಿ ನಡೆಸುವ ಉದ್ದೇಶದಿಂದ ಹೊನ್ನಾವರ ತಾ.ಪಂ ಸಭಾಭವನದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್‌ ವಾಸರೆ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು..

ಸುಮಾರು 25ವರ್ಷಗಳ ನಂತರ ಹೊನ್ನಾವರದ ನೆಲದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯು ಸಂಪದ್ಭರಿತವಾಗಿದೆ. ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಬೇಕು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವ ಆಶಾಭಾವನೆ ಇದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರು ಹೇಳಿದ್ರು..

ತಹಶೀಲ್ದಾರ ರವೀರಾಜ ದೀಕ್ಷಿತ್, ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ್ ನಾಯ್ಕ ಜಿಲ್ಲಾ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಎಲ್ಲಾ ರೀತಿಯ ಸಹಾಯ,ಸಹಕಾರ ನೀಡುವುದಾಗಿ ಭರವಸೆ ನೀಡಿದ್ರು…

ಈಗಾಗಲೇ ಕಾರ್ಯಕ್ರಮದ ಅಂದಾಜು ವೆಚ್ಚ ಮಾಡಲಾಗಿದೆ. ಜಿಲ್ಲೆಯಲ್ಲಿ ಸರಿಸುಮಾರು 6,000 ಅಜೀವ ಸದಸ್ಯರಿದ್ದು, ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಆಮಂತ್ರಣ ಪತ್ರಿಕೆ ತಲುಪಿಸುತ್ತೇವೆ ಎಂದು ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ ಹೇಳಿದ್ರು..

ಜಾನಪದ ವಿದ್ವಾಂಸ ಡಾ. ಎನ್.ಆರ್.ನಾಯಕ ಮಾತನಾಡಿ, ಕನ್ನಡಿಗರ ಕಾರ್ಯಕ್ರಮ ಕನ್ನಡಿಗರೆಲ್ಲರೂ ವಿಜೃಂಭಿಸಬೇಕಾದ ಕಾರ್ಯಕ್ರಮ. ಕನ್ನಡದ ಅಭಿಮಾನಿಗಳು ಎಲ್ಲರೂ ಒಮ್ಮನಸ್ಸಿನಿಂದ ಕೆಲಸ ಮಾಡಿ ಯಶಸ್ವಿಗೊಳಿಸಬೇಕು ಎಂದು ಹೇಳಿದ್ರು..

ಈ ವೇಳೆ ಸಾಹಿತಿ ಶ್ರೀಪಾದ ಶೆಟ್ಟಿ ಮಾತನಾಡಿ, ಹೊನ್ನಾವರದ ಜನರು ಸಾಹಿತ್ಯಪ್ರೇಮಿಗಳು, ಸಾಹಿತ್ಯದ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಾರೆ. ಜಿಲ್ಲಾ ಸಮ್ಮೇಳನ ಆಗಿರುವುದರಿಂದ ಇಡೀ ಜಿಲ್ಲೆಯ ಎಲ್ಲಾ ತಾಲೂಕಿನ ಜನರು ಮತ್ತು ಸ್ಥಳಿಯ ಸಂಸ್ಥೆಗಳು ಸಹಕಾರ ನೀಡಬೇಕು ಎಂದರು.

ಈ ವೇಳೆ ಕೃಷ್ಣಮೂರ್ತಿ ಹೆಬ್ಬಾರ್, ಎಮ್.ಎನ್ ಸುಬ್ರಹ್ಮಣ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಮ್.ಜಿ ನಾಯ್ಕ, ಉದ್ಯಮಿ ಜಿ.ಜಿ ಶಂಕರ, ಕರವೇ ತಾಲೂಕಾದ್ಯಕ್ಷ ಮಂಜುನಾಥ ಗೌಡ ಇತರರು ಸೇರಿದಂತೆ ಕಸಾಪ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ರು..