“ರೈತರಿಗಾಗಿಯೆ ಹುಟ್ಟಿಕೊಂಡಿದ್ದು ಸಹಕಾರ ಸಂಸ್ಥೆ-ಕೆಡಿಸಿಸಿ ಬ್ಯಾಂಕ್ & ಖರ್ವಾ ವಿಎಸ್ ಎಸ್ ನಿರ್ದೇಶಕ ವಿಶ್ವನಾಥ ಭಟ್ಟ

ಹೊನ್ನಾವರ:”ರೈತರಿಗಾಗಿಯೆ ಹುಟ್ಟಿಕೊಂಡಿದ್ದು ಸಹಕಾರ ಸಂಸ್ಥೆ.ರೈತ ಸಹಕಾರರ ಸಂಘಗಳ ಶಕ್ತಿಯಾಗಿದ್ದು,ಸಂಸ್ಥೆ ಉತ್ತಮವಾಗಿ ಮುನ್ನಡೆಯಲು ರೈತನ ಪಾತ್ರ ಪ್ರಮುಖವಾಗಿದೆ” ಎಂದು ಕೆಡಿಸಿಸಿ ಬ್ಯಾಂಕ್ ಹಾಗೂ ಖರ್ವಾ ವಿಎಸ್ ಎಸ್ ನಿರ್ದೇಶಕರಾದ ವಿಶ್ವನಾಥ ಭಟ್ಟ ಅಭಿಪ್ರಾಯಪಟ್ಟರು.

ಹೊನ್ನಾವರ ತಾಲೂಕಿನ ಖರ್ವಾ ಕೊಳಗದ್ದೆ ಶ್ರೀ ಸಿದ್ದಿವಿನಾಯಕ ಫ್ರೌಢಶಾಲೆಯಲ್ಲಿ ಖರ್ವಾ ವಿಎಸ್ಎಸ್ ನಿಂದ ಸಹಕಾರ ಸಪ್ತಾಹ ನಿಮಿತ್ತ ‘ದೇಶದ ಆರ್ಥಕತೆಯಲ್ಲಿ ಸಹಕಾರ ಸಂಘಗಳ ಪಾತ್ರ’ ಎನ್ನುವ ವಿಷಯದ ಮೇಲೆ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಭಾಷಣ ಸ್ಪರ್ಧಾ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.ಸಹಕಾರ ಸಂಘಗಳು ಸಹ ರೈತನ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು,ರೈತ ಹಸನಾಗಿ ಬದುಕಿರಲು ಸಹಕಾರಿ ಸಂಘಗಳ ಸೇವೆಯು ಪ್ರಮುಖವಾಗಿರುತ್ತದೆ. ರೈತರು ಸಂಘದಿಂದ ನೀಡುವ ಸಾಲಸೌಲಭ್ಯದ ಪ್ರಯೋಜನ ಪಡೆದು ಸಕಾಲಕ್ಕೆ ತುಂಬಿ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದರು‌.

ಖರ್ವಾ ವ್ಯವಸಾಯ ಸೇವಾ ಸಹಕಾರಿ ಸಂಘದ ವ್ಯವಸ್ಥಾಪಕರಾದ ಮೋಹನ್ ನಾಯ್ಕ ಮಾತನಾಡಿ,1904ರಲ್ಲಿ ಸಹಕಾರ ಸಂಘಗಳ ಉದಯವಾಗಿತ್ತು. ಸಹಕಾರ ಸಂಘಗಳು ಅಂದರೆ ಕೇವಲ ಪಡಿತರ ನೀಡುವ ಅಂಗಡಿಗಳು ಎನ್ನುವಂತ ಭ್ರಮೆ ಇಂದಿಗೂ ಇದೆ. ಸಹಕಾರ ಸಂಘಗಳಿಂದಲೆ ಇವತ್ತು ಅದೆಷ್ಟೋ ರೈತನ ಅಭಿವೃದ್ಧಿ ಆಗುತ್ತಿದೆ. ಒಬ್ಬ ರೈತನ ಅಭಿವೃದ್ಧಿಯಾದರೆ ಒಂದು ಸಂಘ ಅಭಿವೃದ್ಧಿ ಆಗಲು ಸಾಧ್ಯ. ಸಂಘ ಅಭಿವೃದ್ಧಿಯಾದರೆ ಒಂದು ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸಿದ್ದಿವಿನಾಯಕ ಫ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಎಸ್.ಎಲ್ ನಾಯ್ಕ ಮಾತನಾಡಿ ಖರ್ವಾ ಸೊಸೈಟಿಗೆ ಪ್ರತಿಷ್ಠಿತ ಅಪೆಕ್ಸ್ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಚಾರ. ಈ ಪ್ರಶಸ್ತಿ ಲಭಿಸಲು ಸಂಘದ ಕಾರ್ಯಚಟುವಟಿಕೆಯು ಪ್ರಧಾನವಾಗಿದೆ.ಈ ದಿಸೆಯಲ್ಲಿ ಖರ್ವಾ ಸೊಸೈಟಿ ಉತ್ತಮವಾದ ಕಾರ್ಯ ನಿರ್ವಹಿಸುತ್ತಿದೆ. ಎಂದರು.

ಭಾಷಣ ಸ್ಪರ್ಧೆಯಲ್ಲಿ ಮಾನಸ ಗೌಡ ಪ್ರಥಮ,ಶ್ರೇಯಾ ಗೌಡ ದ್ವಿತೀಯ ,ಮಧುರಾ ಗೌಡ ತೃತೀಯ ಸ್ಥಾನ ಪಡೆದರು.ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ನೀಡಿದರು.

ಶ್ರೀ ಸಿದ್ದಿವಿನಾಯಕ ಫ್ರೌಢಶಾಲೆಯ ಶಿಕ್ಷಕರಾದ ಆರ್.ಎಸ್ ನಾಯ್ಕ,ಅಶೋಕ್ ರಾಥೋಡ್,ಚೆನ್ನಕೇಶವ ಹೆಗಡೆ,ಡಿ.ಬಿ ಮುರಾರಿ,ಅರ್ಚನಾ ಶೆಟ್ಟಿ,ಖರ್ವಾ ವಿಎಸ್ ಎಸ್ ಸಿಬ್ಬಂದಿಗಳಾದ ವಿಷ್ಣು ಆಚಾರಿ,ಗಣಪತಿ ಹೆಗಡೆ ಉಪಸ್ಥಿತರಿದ್ದರು.