ಬೆಳಗಾವಿ ವಿಭಾಗ ಮಟ್ಟದ ಖೋ ಖೋ ಕ್ರೀಡಾಕೂಟಕ್ಕೆ ಆಯ್ಕೆಯಾದ ಮಲ್ಲುಕುರ್ವಾ ಸ.ಹಿ.ಪ್ರಾ ಶಾಲೆ ವಿದ್ಯಾರ್ಥಿನಿಯರು

ಹೊನ್ನಾವರ: ತಾಲೂಕಿನ ಕಾಸರಕೋಡ್ ಮಲ್ಲುಕುರ್ವಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಬೆಳಗಾವಿಯಲ್ಲಿ ನಡೆಯುವ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ

ಅಮೃತ ಸುಬ್ರಾಯ ತಾಂಡೇಲ್, ಧನ್ಯಶ್ರೀ, ಅಮೂಲ್ಯ, ಸಮೃದ್ಧಿ, ಚೈತನ್ಯ, ಆಯಿಷಾಫರಾಹ,ಸಾಕ್ಷಿ, ಸೌಜನ್ಯ, ಸ್ವಹೀಫಾ,ಆಯಶತ್ಐಫಾ, ಹರ್ಷಿತ, ಸಮೃದ್ಧಿ, ಭೂಮಿಕಾ ತಾಂಡೇಲ್ ಆಯ್ಕೆಯಾದ ವಿದ್ಯಾರ್ಥಿನಿಯರು. ಇವರನ್ನು ತರಬೇತುಗೊಳಿಸಿದ‌ ದೈಹಿಕ ಶಿಕ್ಷಕಿಯರಾದ ಶ್ಯಾಮಲಾ ನಾಯ್ಕ,ಹಳೆ ವಿದ್ಯಾರ್ಥಿಗಳಾದ ಧೀರಜ್ ತಾಂಡೇಲ್, ನಿಸರ್ಗ ತಾಂಡೇಲ ರನ್ನು ಶಾಲಾ ಮುಖ್ಯಾಧ್ಯಾಪಕಿ ಗೀತಾ ಷಡಕ್ಷರಿಯವರು ಹಾಗೂ ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸದಸ್ಯರು,ಜೈನ ಜಟಕೇಶ್ವರ ಯುವಕ ಸಂಘದವರು ಹಾಗೂ ಊರಿನ ಪಾಲಕರು ಅಭಿನಂದಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.