ಇವತ್ತಿನ ಯುವ ಜನತೆ ಮುಂದಿನ ಭಾರತದ ಪ್ರಜೆಗಳು, ಅವರು ಭಾರತದ ಗೌರವವನ್ನ ಇಡೀ ಜಗತ್ತಿನಲ್ಲಿ ಎತ್ತಿ ಹಿಡಿಯಬೇಕಾಗಿದೆ-ವಿಶ್ವನಾಥ ನಾಯಕ್

ಹೊನ್ನಾವರ: “ಇವತ್ತಿನ ಯುವ ಜನತೆ ಮುಂದಿನ ಭಾರತದ ಪ್ರಜೆಗಳು, ಅವರು ಭಾರತದ ಗೌರವವನ್ನ ಇಡೀ ಜಗತ್ತಿನಲ್ಲಿ ಎತ್ತಿ ಹಿಡಿಯಬೇಕಾಗಿದೆ”ಎಂದು ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಮುಖಂಡರಾದ ವಿಶ್ವನಾಥ ನಾಯಕ್ ಹೇಳಿದರು.

ಪಟ್ಟಣದಲ್ಲಿ ವಿಶ್ವ ಹಿಂದೂಪರಿಷತ್-ಬಜರಂಗದಳದಿಂದ ಮಂಗಳವಾರ ಸಾಯಂಕಾಲ ಹಮ್ಮಿಕೊಂಡ ಶೌರ್ಯ ಜಾಗರಣ ರಥಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು‌.ಹಿಂದೂ ಧರ್ಮದ ಮೇಲೆ ನೂರಾರು ವರ್ಷಗಳ ಕಾಲ ಪರಕೀಯರ ದಾಳಿ ನಡೆದಾಗಲೂ ಧರ್ಮವೂ ಈ ನೆಲದಲ್ಲಿ ನೆಲೆಯೂರಿದೆ. ಹಿಂದೂ ಧರ್ಮದ ರಕ್ಷಣೆಗಾಗಿ ಅನೇಕ ಮಹನೀಯರ ತ್ಯಾಗ ಮತ್ತು ಬಲಿದಾನವಿದೆ. ಇದನ್ನೂ ಇಂದಿನ ಯುವ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ಇವತ್ತಿನ ರಥ ಯಾತ್ರೆಯ ಮುಖ್ಯ ಉದ್ದೇಶ ಯುವ ಜನತೆಗೆ ನಮ್ಮ ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಕಲಿಸಿಕೊಡುವುದಾಗಿದೆ. ಮಹಾಪುರುಷರ ತ್ಯಾಗವನ್ನು ಬಲಿದಾನವನ್ನು ನೆನಪಿಸಿಕೊಳ್ಳುವ ಸಲುವಾಗಿ ಈ ಒಂದು ರಥಯಾತ್ರೆಯನ್ನು ನಾವು ಕೈಗೊಂಡಿದ್ದೇವೆ.ನಾವು ಸ್ವಾಭಿಮಾನಿಯಾಗಿರಬೇಕು.ಇವತ್ತಿನ ಯುವ ಜನತೆ ದುಶ್ಚಟಗಳಿಂದ ದೂರವಾಗಿರಬೇಕು. ಅವರ ಆದರ್ಶ ಶಿವಾಜಿ ಮಹಾರಾಜರು,ರಾಣಾ ಪ್ರತಾಪ್ ಸಿಂಹ, ಭಗತ್ ಸಿಂಗ್,ಚಂದ್ರಶೇಖರ್ ಆಜಾದ್ ಆಗಿರಬೇಕು ಅಥವಾ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ,ರಾಣಿ ಅಬ್ಬಕ್ಕ ಆಗಿರಬೇಕೆ ವಿನಃ ಸಿನಿಮಾ ನಟರು ಆದರ್ಶವಾಗಿ ಇರಬಾರದು. ಇದನೆಲ್ಲವನ್ನ ಅವರಿಗೆ ಕಲಿಸಿಕೊಡಬೇಕಾಗಿದೆ. ಇಡೀ ಜಗತ್ತಿನಲ್ಲಿ ಭಾರತವನ್ನು ವಿಶ್ವಗುರು ಆಗಿ ಮಾಡಬೇಕಾಗಿದೆ. ಅದಕ್ಕಾಗಿ ಸ್ವಾವಲಂಬಿಯಾಗಿ ಅವರು ಬದುಕಬೇಕಾಗಿದೆ. ಈ ಆದರ್ಶವನ್ನ ಜಗತ್ತಿಗೆ ತೋರಿಸಿಕೊಡಬೇಕಾಗಿದೆ. ಯುವ ಜನತೆಯಲ್ಲಿ ಆದರ್ಶವನ್ನ ಬೆಳಸಬೇಕು ಎಂದು ಕರೆ ನೀಡಿದರು.ಸನಾತನ ಧರ್ಮ ಎನೆಂಬುವದ ಅರ್ಥೈಸಿಕೊಳ್ಳದವರು ಸನಾತನ ಧರ್ಮದ ಬಗ್ಗೆ ಹೇಳಿಕೆ ಕೊಡುತ್ತಿರುವುದು ದುರದೃಷ್ಟಕರ ಸಂಗತಿ.ತಮ್ಮ ಧರ್ಮದ ಬಗ್ಗೆ ತಿಳಿಯದವರು,ಸರಿಯಾಗಿ ನಡೆಸಿಕೊಳ್ಳದವರು ಸನಾತನಧರ್ಮದ ಬಗ್ಗೆ ಮಾತನಾಡುವ ಉದ್ದಟತನ ತೋರಿಸುತ್ತಿದ್ದಾರೆ.ಹಿಂದೂಗಳು ಒಗ್ಗೂಡುವ ಸಂದರ್ಭ ಬಂದಿದೆ ಎಂದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ಮೂಲಕ ಶೌರ್ಯ ಜಾಗರಣ ರಥಯಾತ್ರೆ ಮೆರವಣಿಗೆ ನಡೆಸಿ ಶನೇಶ್ವರ ದೇವಸ್ಥಾನದ ಎದುರು ಮೆರವಣಿಗೆ ಸಂಪನ್ನಗೊಳಿಸಿ ರಥಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಲಾಯಿತು.ನಂತರ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಸಂಘಟಕರು ತಂಪುಪಾನೀಯ,ಪ್ರಸಾದ ವಿತರಿಸಿದರು.
ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯ ಹಿಂದೂ ಮುಖಂಡರು ಪಾಲ್ಗೊಂಡಿದ್ದರು. ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.