ವಶು ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಹೊನ್ನಾವರದ ಅನ್ವಿತಾ ನಾಯ್ಕ

ಹೊನ್ನಾವರದ ಅನ್ವಿತಾ ನಾಯ್ಕ ಬಾಗಲಕೋಟೆಯಲ್ಲಿ ನಡೆದ ಬೆಳಗಾವಿ ವಿಭಾಗದ ವಶು ಚಾಂಪಿಯನ್‌ಶಿಫ್‌ ದಸರಾ ಕ್ರೀಡಾಕೂಟದಲ್ಲಿ, ಚಿನ್ನದ ಪದಕ ಪಡೆಯುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ…
ಹೊನ್ನಾವರದ ಅನ್ವಿತಾ ನಾಯ್ಕ ಬಾಗಲಕೋಟೆಯಲ್ಲಿ ನಡೆದ ಬೆಳಗಾವಿ ವಿಭಾಗದ ವಶು ಚಾಂಪಿಯನ್‌ಶಿಫ್‌ ದಸರಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದು ಜಿಲ್ಲೆಗೆ ಕೀರ್ತಿ ತರುವುದರ ಜೊತೆಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ…

ಬಾಗಲಕೋಟೆಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬೆಳಗಾವಿ ವಿಭಾಗದ ದಸರಾ ಕ್ರೀಡಾಕೂಟದಲ್ಲಿ ಅನ್ವಿತಾ ಭಾಗವಹಿಸಿದ್ದಳು. ವಶು ಲೀಗ್ ಸಬ್ ಜೂನಿಯರ್ ಶಾನ್ಸು 42 ಕೆ.ಜಿ. ಒಳಗಿನ ವಿಭಾಗದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಜೊತೆಗೆ ಅ.11 ರಿಂದ 15ರವರೆಗೆ ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ. ಈ ಬಗ್ಗೆ ಅನ್ವಿತಾ ನುಡಿಸಿರಿ ವಾಹಿನಿಯೊಂದಿಗೆ ಮಾತನಾಡಿ ಸಂತಸ ಹಂಚಿಕೊಂಡಿದ್ದಾಳೆ…ವಶುನಲ್ಲಿ ಸಾಧನೆಗೈಯುತ್ತಿರುವ ಬಾಲಕಿ ಅನ್ವಿತಾ ಹೊನ್ನಾವರ ತಾಲೂಕಿನ ಸಾಲ್ಕೋಡ್ ಗ್ರಾಮದ ಹಂದಿಗದ್ದೆಯ ನಿವಾಸಿ ಪ್ರೇಮಾ ಮತ್ತು ನಾಗೇಂದ್ರ ನಾಯ್ಕ ದಂಪತಿ ಪುತ್ರಿ. ಪಟ್ಟಣದ ಮಾರ್ಥೋಮಾ ಶಾಲೆಯಲ್ಲಿ 8ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಅನ್ವಿತಾ, ವಶು ಅಶೋಸಿಯೇಶನ್ ಜನರಲ್ ಸೆಕ್ರಟರಿ ರಾಘವೆಂದ್ರ ಹೊನ್ನಾವರ ಅವರ ರಾಯಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ‌. ಮಗಳ ಸಾಧನೆಗೆ ಪಾಲಕರು ಬೆನ್ನೆಲುಬಾಗಿದ್ದು, ಪ್ರತಿ ಹಂತದಲ್ಲಿಯೂ ಪ್ರೊತ್ಸಾಹಿಸುತ್ತಾ ಬಂದಿದ್ದಾರೆ. ಮಗಳ ಸಾಧನೆ ಬಗ್ಗೆ ತಂದೆ ನಾಗೇಂದ್ರ ನಾಯ್ಕ ಹರ್ಷ ವ್ಯಕ್ತಪಡಿಸಿ, ವಶು ತರಬೇತುದಾರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು..

ವಶು ಇದು ಒಲಂಪಿಕ್ ಕ್ರೀಡೆ, ರಾಜ್ಯಮಟ್ಟದಲ್ಲಿ ಜಯಶಾಲಿಯಾದವರಿಗೆ ರಾಜ್ಯ ಸರ್ಕಾರದಿಂದ ಹತ್ತುಸಾವಿರ ಸ್ಕಾಲರ್ ಶಿಪ್ ಸಿಗುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ವಿಜೇತರಾದವರಿಗೆ 1 ರಿಂದ 5 ಲಕ್ಷದವರೆಗೆ ಸಹಾಯಧನ ಸಿಗುತ್ತದೆ. ಅಲ್ಲದೇ ಉದ್ಯೋಗ ನಿರ್ವಹಿಸಲು ಸಹಾಯಧನ ಲಭಿಸುತ್ತದೆ. ಮಾರ್ಷಲ್ ಆರ್ಟ್ ನಲ್ಲಿ ಅತಿ ಹೆಚ್ಚು ಪ್ರಶಸ್ತಿ ಗಳಿಸುತ್ತಿರುವ ಕ್ರೀಡೆಯಾಗಿದೆ ಎಂದು ವಶು ಕ್ರೀಡೆಯ ಬಗ್ಗೆ ವಶು ಅಶೋಸಿಯೇಶನ್ ಜನರಲ್ ಸೆಕ್ರಟರಿ ರಾಘವೆಂದ್ರ ಹೊನ್ನಾವರ ಹೇಳಿದ್ರು..ಮಾರ್ಷಲ್ ಆರ್ಟ ಇದು ಕೇವಲ ಕ್ರೀಡೆಯಲ್ಲ, ಶಿಕ್ಷಣದ ಜೊತೆಗೆ ಮಾನಸಿಕ ಸ್ಥೈರ್ಯ, ಸದೃಡತೆ, ಏಕಾಗ್ರತೆ ಬೆಳೆಸುತ್ತದೆ. ಕಳೆದ 20 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ರಾಯಲ್ ಅಕಾಡೆಮಿಯಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೂ ಆಯ್ಕೆಯಾಗಿರುವ ಪ್ರತಿಭೆಗಳಿದ್ದಾರೆ. ಹೆಣ್ಣು ಮಕ್ಕಳಿಗೆ ಈ ಕಲೆ ಹೆಚ್ಚು ಸಹಾಯಕಾರಿಯಾಗಲಿದೆ ಎಂದು ಕೋಚ್ ವಿದ್ಯಾ ಭಂಡಾರಿ ಹೇಳಿದ್ರು.. ಬಾಲಕಿಯ ಈ ಸಾಧನೆಗೆ ಸಚಿವ ಮಂಕಾಳ ವೈದ್ಯ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ, ಮಾರ್ಥೊಮಾ ಶಿಕ್ಷಣ ಸಂಸ್ಥೆಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ…‌