ಹಳದೀಪುರದ ರಾ.ಹೆ.66ರ ಚತುಷ್ಪಥ ಕಾಮಗಾರಿ ವಿರುದ್ದ ಗ್ರಾಮಸ್ಥರ ಪ್ರತಿಭಟನೆ

ಹೊನ್ನಾವರ: ತಾಲೂಕಿನ ಹಳದಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾ.ಹೆ 66ರ ಚತುಷ್ಪಥ ಕಾಮಗಾರಿಯ ಹಲವು ರೀತಿಯ ಅವ್ಯವಸ್ಥೆ ಬಗ್ಗೆ ಗುತ್ತಿಗೆದಾರ ಕಂಪನಿಯ ವಿರುದ್ಧ ರಸ್ತೆ ತಡೆ ನಡೆಸಿ ಗ್ರಾಮ ಪಂಚಾಯತನ ಜನಪ್ರತಿನಿಧಿಗಳು,ಸ್ಥಳೀಯರು ಸೇರಿ ಬುಧವಾರ ಬ್ರಹತ್ ಪ್ರತಿಭಟನೆ ನಡೆಸಿದರು,ಸಮಸ್ಯೆ ಬಗೆ ಹರಿಸುವವರೆಗೆ ಟೋಲ್ ಬಂದ್ ಮಾಡುವಂತೆ ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಹಾಕಿರುವ ದಾರಿ ದೀಪವು ದುಸ್ಥಿತಿಯಲ್ಲಿದೆ.ನಿಗದಿತ ಮಾರ್ಗದವರೆಗಿನ ಕಾಮಗಾರಿನು ಕೂಡ ಪೂರ್ಣಗೊಳ್ಳಿಸಿಲ್ಲ. ಗಟಾರ ಕೆಲಸವೂ ಕೂಡ ಸಂಪೂರ್ಣ ಕಾಮಗಾರಿ ನಡೆಸದೆ ಅದು ಕೂಡಾ ಅರ್ಧಕ್ಕೆ ಸ್ಥಗಿತಗೊಂಡಿದೆ. ಈ ಎಲ್ಲ ಉದ್ದೇಶವನ್ನಿಟ್ಟುಕೊಂಡು ಹಳದಿಪುರ ಗ್ರಾಮ ಪಂಚಾಯತನ ಜನಪ್ರತಿನಿಧಿಗಳು,ಗ್ರಾಮಸ್ಥರು ಧರಣಿಯನ್ನು ನಡೆಸಿದರು.
ಐಆರ್‍ಬಿ ಕಂಪನಿಯ ವಿರುದ್ದ ದಿಕ್ಕಾರ ಕೂಗಿದರು.ಸ್ಥಳಕ್ಕೆ ತಹಶೀಲ್ದಾರ ಮತ್ತು ಆಯ್ ಆರ್ ಬಿ ಕಂಪನಿಯ ಅಧಿಕಾರಿಗಳು ಬರುವಂತೆ ಬಿಗಿಪಟ್ಟುಹಿಡಿದರು.ಪ್ರತಿಭಟನೆ ಕಾವು ಪಡೆದ ಹಿನ್ನಲೆ ಸ್ಥಳಕ್ಕೆ ಆಯ್ ಆರ್ ಬಿ ಕಂಪನಿಯ ಅಧಿಕಾರಿಗಳು ಆಗಮಿಸಿದರು. ಈ ವೇಳೆ ಪ್ರತಿಭಟನಾನಿರತರು ಕಂಪನಿ ವಿರುದ್ದ ಆಕ್ರೋಶ ವ್ಯಕ್ತಪಡಿಸದರು. ಕೆಲಕಾಲ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಯಿತು.

ಬೇಡಿಕೆ ಈಡೇರುವವರೆಗೆ ಟೊಲ್ ಬಂದ್ ಮಾಡಲು ಆಗ್ರಹಿಸಿದರು. ತಹಶೀಲ್ದಾರ ಸಮ್ಮುಖದಲ್ಲಿ 15 ದಿನಗಳಲ್ಲಿ ಕಾಮಗಾರಿ ಮುಂದುವರಿಸುತ್ತೇವೆ ಎಂದು ಆಯ್ ಆರ್ ಬಿ ಕಂಪನಿಯ ಅಧಿಕಾರಿ ಮಲ್ಲಿಕಾರ್ಜುನ ಜನತೆಗೆ ಭರವಸೆ ನೀಡಿದರು.
ಬೈಟ್: ಮಲ್ಲಿಕಾರ್ಜುನ, ಅಧಿಕಾರಿ
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ರವಿರಾಜ ದೀಕ್ಷಿತ್ ಮತ್ತು ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಆಯ್ ಆರ್ ಬಿ ಕಂಪನಿಯ ಅಧಿಕಾರಿಗಳಿಗೆ ಮತ್ತು ತಹಶೀಲ್ದಾರ ಅವರಿಗೆ ಪ್ರತಿಭಟನಾ ನಿರತರು ಮನವಿ ಸಲ್ಲಿಸಿದರು. ನಂತರ ಗ್ರಾಮ ಪಂಚಾಯತ ಅಧ್ಯಕ್ಷೆ ಪುಷ್ಪಾ ಮಹೇಶ ನಾಯ್ಕ ಮಾಧ್ಯಮದವರೊಂದಿಗೆ ಮಾತನಾಡಿ ಈಗಾಗಲೇ ಐಆರ್ ಬಿ ಅವರಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ಗಮನಕ್ಕೆ ತರಲು ಪ್ರಯತ್ನಿಸಿದರು ಯಾವುದೇ ರೀತಿಯ ಪ್ರತಿಕ್ರಿಯೆ ಇಲ್ಲ. ನೆರೆಯ ಗ್ರಾಮದಲ್ಲಿ ಸಮಸ್ಯೆ ಬಗೆಹರಿಯುತ್ತದೆ.ನಮ್ಮ ಗ್ರಾಮದಲ್ಲಿ ಮಾತ್ರ ಆಯ್ ಆರ್ ಬಿ ಸಮಸ್ಯೆ ಬಗೆ ಹರಿಯುತ್ತಿಲ್ಲಾ. ಆದ ಕಾರಣ ಗ್ರಾಮ ಪಂಚಾಯತ ಜನಪ್ರತಿನಿಧಿಗಳು ಹಾಗು ಊರಿನ ನಾಗರಿಕರು ಎಲ್ಲರು ಕೂಡಿ ಧರಣಿ ನಡೆಸಿದ್ದೇವೆ ಎಂದರು. ಕಳೆದ 2 ವರ್ಷದ ಹಿಂದೆ ದಾರಿದೀಪ ಅಳವಡಿಸುವಂತೆ ಪ್ರತಿಭಟನೆ ಮಾಡಿದಾಗ ಶೇಕಡಾ 75 ರಷ್ಟು ದಾರಿದೀಪ ಅಳವಡಿಸಿದ್ದರು.ನಂತರದ ದಿನಗಳಲ್ಲಿ ಕಂಪನಿಗೆ ಸಾಕಷ್ಟು ಬಾರಿ ಮನವಿಮಾಡಿದರು ಇಲ್ಲಿಯವರೆಗೆ ಕಾಮಗಾರಿ ಪೂಣಗೊಳಿಸಿಲ್ಲಾ.ಹಿಂದೆ ಅಳವಡಿಸಿದ ದಾರಿದೀಪ ದುಸ್ಥಿಯಲ್ಲಿದೆ. ಕಂಪನಿ ಅಧಿಕಾರಿಗಳು ಭರವಸೆ ನೀಡಿದಂತೆ 15 ದಿನ ನಾವು ತಾಳ್ಮೆಯಿಂದ ಕಾಯುತ್ತೆವೆ .ಒಂದೊಮ್ಮೆ ಕೆಲಸ ಆಗದೆ ಇದ್ದಲ್ಲಿ 16 ನೇ ದಿನಕ್ಕೆ ನಾವು ಉಗ್ರ ಹೋರಾಟಮಾಡಿ ರಸ್ತೆತಡೆ ನಡೆಸುತ್ತೆವೆ ಹಳದೀಪರ ಜನತೆಗೆ ನ್ಯಾಯ ಕೋಡಿಸುತ್ತೆವೆ ಎಂದು ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಅಜಿತ ನಾಯ್ಕ ಕಂಪನಿಗೆ ಖಡಕ್ ಎಚ್ಚರಿಕೆ ರವಾನಿಸಿದರು. ಆಯ್ ಆರ್ ಬಿ ಕಂಪನಿ ಅವಾಂತರದ ಬಗ್ಗೆ ಶಾಸಕರ ಗಮನಕ್ಕೆ ತಂದರು ಕಂಪನಿ ಕ್ಯಾರೆ ಎನ್ನುತ್ತಿಲ್ಲ ಎಂದು ನಿವೃತ್ತ ತಹಶೀಲ್ದಾರ ವಿ.ಆರ್ ಗೌಡ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ನವೀನ್ ನಾಯ್ಕ , ಶ್ಯಾಮಲಾ ನಾಯ್ಕ, ಗಣೇಶ ಪೈ, ಮಹೇಶ್ ನಾಯ್ಕ,ರತ್ನಾಕರ ನಾಯ್ಕ, ಎಮ್ ಎಚ್ ನಾಯ್ಕ,ಈಶ್ವರ ನಾಯ್ಕ, ಸಂಶೀರ್ ಖಾನ್,ಗಿರೀಶ್ ,ಮಮತಾ ಶೇಟ್ ,ನಾಗವೇಣಿ ಗೌಡ,ಕಮಲಾ ಗೌಡ,ರೇಣುಕಾ ಹಳದೀಪುರ,ಸೀಮಾ ,ವರ್ಧಮಾನ ಜೈನ್,ಶಾಹಿರಾ ಶಾ, ಸುಶೀಲಾ ನಾಯ್ಕ, ದಾಮೋದರ ನಾಯ್ಕ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.