ಹಳಿಯಾಳ : ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಶಾಸಕ ಆರ್.ವಿ.ದೇಶಪಾಂಡೆಯವರ ಅಧ್ಯಕ್ಷತೆಯಲ್ಲಿ ಆಶ್ರಯ ಸಮಿತಿ ಸಭೆಯು ಇಂದು ಬುಧವಾರ ಜರುಗಿತು.
ಪಟ್ಟಣದ ದೇಶಪಾಂಡೆ ನಗರದ ಮಾರ್ಗದಲ್ಲಿ AHP ಘಟಕದಡಿ ನಿರ್ಮಾಣವಾದ ಜಿ+2 ಮಾದರಿಯ ಆಶ್ರಯ ಮನೆಗಳ 2ನೇ ಹಂತದಲ್ಲಿ ಪೂರ್ಣ ವಂತಿಗೆ ಭರಣಾ ಮಾಡಿದ ಫಲಾನುಭವಿಗಳಿಗೆ ಆರ್.ವಿ.ದೇಶಪಾಂಡೆಯವರು ಪ್ಲ್ಯಾಟ್ ಸಂಖ್ಯೆಯನ್ನು ಗುರುತಿಸಿ ಹಸ್ತಾಂತರಿಸಿದರು.
ಸಭೆಯಲ್ಲಿ ಸಹಾಯಕ ಆಯುಕ್ತರಾದ ಜಯಲಕ್ಷ್ಮೀ ರಾಯಕೋಡ, ತಹಶೀಲ್ದಾರ್ ಜಿ.ಕೆ.ರತ್ನಾಕರ, ಪುರಸಭೆಯ ಮುಖ್ಯಾಧಿಕಾರಿ ಅಶೋಕ್ ಸಾಳೆನ್ನವರ ಮೊದಲಾದವರು ಉಪಸ್ಥಿತರಿದ್ದರು.