ಹೊನ್ನಾವರ:ಪಟ್ಟಣದ ಪ್ರಭಾತನಗರದ ಮೂಡಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ, ಡಿಸೆಂಬರ್ 2, 2023 ರಂದು ಶಿರಸಿಯಲ್ಲಿ ಜರುಗುವ ಕಸ್ತೂರಿ ರಂಗನ್ ವರದಿ ವಿರೋಧ ರ್ಯಾಲಿಯ ಪೂರ್ವಭಾವಿ ಸಭೆಯಲ್ಲಿ ಅರಣ್ಯವಾಸಿಗಳಿಂದ ಭಾರಿ ಬೆಂಬಲ ವ್ಯಕ್ತವಾದವು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ ಕಸ್ತೂರಿ ರಂಗನ್ ವಿರೋಧಿಸಲು ಜಿಲ್ಲೆಯಲ್ಲಿ ಪ್ರಬಲ ಹೋರಾಟ ಅವಶ್ಯ ಎಂದರು.
ಬೈಟ್:ರವೀಂದ್ರ ನಾಯ್ಕ
ನಂತರ ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಪ್ರಮುಖರು,ಅರಣ್ಯವಾಸಿಗಳು ಭೇಟಿ ನೀಡಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿ ಶಂಕರ ಅವರ ಬಳಿ ಚರ್ಚೆ ನಡೆಸಿದರು.
ಜಿಪಿಎಸ್ ಆಗಿದೆ ಮನೆ ಕಟ್ಟಲಿಕ್ಕೆ ಕೊಡುವುದಿಲ್ಲ, ಬಿದ್ದಂತಹ ಮನೆ ಕಟ್ಟಲು ಕೊಡುವುದಿಲ್ಲ, ಸಾಗುವಳಿ ಭೂಮಿಯಲ್ಲಿರುವ ಗಿಡ ಮರಗಳನ್ನ ಕಡಿದು ಹಾಕುತ್ತಾರೆ, ಜಿಪಿಎಸ್ ಅಸಮರ್ಪಕವಾಗಿದೆ, ಸರಿ ಮಾಡುವವರು ಯಾರು? ಅರಣ್ಯ ಸಿಬ್ಬಂದಿಗಳು ಅರಣ್ಯವಾಸಿಗಳಿಗೆ ದೈಹಿಕ ಹಿಂಸೆ ಮಾಡಲು ಕಾನೂನಿನಲ್ಲಿ ಅವಕಾಶ ಇದೆಯೋ? ಹೀಗೆ ಮುಂತಾದ ಪ್ರಶ್ನೆಗಳ ಸುರಿಮಳೆ ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿ ಶಂಕರ ಅವರಿಗೆ ಕೇಳಿಬಂದವು.
ಹೊನ್ನಾವರ ಮತ್ತು ಭಟ್ಕಳ ತಾಲೂಕಿನಿಂದ ಆಗಮಿಸಿದ ಅರಣ್ಯವಾಸಿಗಳು ಅರಣ್ಯ ಸಿಬ್ಬಂದಿಗಳಿಂದ ದೌರ್ಜನ್ಯ, ಕಿರುಕುಳ, ಕಾನೂನು ಬಾಹಿರ ಕೃತ್ಯ, ಕಾನೂನಿಗೆ ವ್ಯತಿರಿಕ್ತವಾಗಿ ಒಕ್ಕಲೆಬ್ಬಿಸುವ ಹಾಗೂ ಸಿಬ್ಬಂದಿಗಳ ದುರ್ನಡತೆಯನ್ನ ಛಾಯಾಚಿತ್ರ ಮತ್ತು ವಿಡಿಯೋಗಳ ಮೂಲಕ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಚರ್ಚೆಯ ಸಂದರ್ಭದಲ್ಲಿ ಪ್ರಸ್ತುತ ಪಡಿಸಿದರು.
ಅರಣ್ಯವಾಸಿಗಳ ಅಹವಾಲುಗಳಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿ ಶಂಕರ್ ಅವರು ಅರಣ್ಯವಾಸಿಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಭದ್ರತೆ ನೀಡಲಾಗುವುದು. ಕಾನೂನು ಬಾಹಿರ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗಳ ಮೇಲೆ ಬಂದಿರುವ ಆರೋಪಗಳನ್ನ ತನಿಖೆಗೆ ಒಳಪಡಿಸಲಾಗುವುದೆಂದು ಅವರು ಹೇಳಿದರು.ಚರ್ಚೆಯ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಚಂದ್ರಕಾಂತ ಕೊಚರೇಕರ್, ಜಿಲ್ಲಾಸಂಚಾಲಕರಾಗಿರುವಂತಹ ರಾಮಾ ಮರಾಠಿ ಯಲಕೊಟಗಿ, ಮಹೇಶ ನಾಯ್ಕ,ಸುರೇಶ ಮೇಸ್ತ ಹೊನ್ನಾವರ, ಉಪಾಧ್ಯಕ್ಷ ದಾವೂದ ಸಾಬ್
ಕಾರ್ಯದರ್ಶಿ ರಜಾಕ್, ಸಂಕೇತ ಯಲಕೊಟಗಿ, ಪಾಂಡುರಂಗ ನಾಯ್ಕ,ಬೆಳಕೆ, ಶ್ರೀಕಾಂತ ಶೆಟ್ಟಿ, ಜನಾರ್ಧನ ನಾಯ್ಕ ಚಂದಾವರ, ವಿನೋಧ ನಾಯ್ಕ, ಸುರೇಶ ನಾಯ್ಕ ನಗರಬಸ್ತಿಕೇರಿ, ಸುರೇಶ್ ತುಂಬೊಳ್ಳಿ, ಕೇಶವ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.