ಬೀದಿ ವ್ಯಾಪಾರಿಗಳ ಸಂಘ,ಹೊನ್ನಾವರ ವತಿಯಿಂದ ಸಂಘಟನಾ ಸಭೆ,ಸದಸ್ಯರಿಗೆ ಗುರುತಿನ ಕಾರ್ಡ್ ವಿತರಣಾ ಕಾರ್ಯಕ್ರಮ

ಹೊನ್ನಾವರ: ಪಟ್ಟಣದ ಸೋಶಿಯಲ್ ಕ್ಲಬ್ ಸಭಾಭವನದಲ್ಲಿ ಶುಕ್ರವಾರ ಬೀದಿ ವ್ಯಾಪಾರಿಗಳ ಸಂಘ,ಹೊನ್ನಾವರ ವತಿಯಿಂದ ಸಂಘಟನಾ ಸಭೆ,ಸದಸ್ಯರಿಗೆ ಗುರುತಿನ ಕಾರ್ಡ್ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ದೇಶಿಸಿ ಬೀದಿ ವ್ಯಾಪಾರಿಗಳ ಸಂಘ,ಹೊನ್ನಾವರ ಇದರ ಸಂಸ್ಥಾಪಕ‌ ಅಧ್ಯಕ್ಷ ಅಶೋಕ್ ಜಾದೂಗಾರ್‌ ಮಾತನಾಡಿ,ಸಂಘಟನೆ ಇದ್ದರೆ ಅದೊಂದು ಶಕ್ತಿಯಾಗುತ್ತದೆ.ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು,ನಮ್ಮವರ ಕಷ್ಟಕ್ಕೆ ಸ್ಪಂದಿಸಬಹುದು.ಈ ದ್ರಷ್ಟಿಯಿಂದ ಬೀದಿವವ್ಯಾಪಾರಿಗಳ ಸಂಘ ಆರಂಭಿಸಿದ್ದೇವೆ.ನೊಂದಣಿಯಾದ ಸಂಘಕ್ಕೆ ಮುಂದಿನ ದಿನಗಳಲ್ಲಿ ರಾಜ್ಯ, ಕೇಂದ್ರ ಸರ್ಕಾರದ ಸೌಲಭ್ಯಗಳು ಲಭಿಸಬಹುದು ಎನ್ನುವ ವಿಚಾರದಿಂದ ಸಂಘ ನೋಂದಣಿ ಮಾಡಿದ್ದೇವೆ.ಹೊನ್ನಾವರ ಪಟ್ಟಣ ಪಂಚಾಯತ ವತಿಯಿಂದ ಬೀದಿ ವ್ಯಾಪಾರಿಗಳ ಮೇಲೆ ದೌರ್ಜನ್ಯ,ಹಗಲು ದರೋಡೆ ನಡೆಯುತ್ತಿದೆ.ಇದರ ವಿರುದ್ದ ಸಂಘಟನೆ ವತಿಯಿಂದ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವ ಅನಿವಾರ್ಯತೆ ಬರಬಹುದು ಎಂದರು.

ಸಂಘಟನೆಯ ಸದಸ್ಯ ಶ್ರೀರಾಮ ಜಾದೂಗಾರ್ ಮಾತನಾಡಿ, ಸಂಘಟನೆ ಎಂದರೆ ಅದು ಒಂದು ಕುಟುಂಬ,ಇಲ್ಲಿ ಎಲ್ಲರ ಒಗ್ಗೂಡುವಿಕೆ ಮುಖ್ಯ.ಸಂಘದ ಸದಸ್ಯರಿಗೆ ಅವರ ಕುಟುಂಬಕ್ಕೆ ಕಷ್ಟ ಬಂದಾಗ,ಅಂಗಡಿಗೆ ಅವಘಡಕ್ಕೆ ತುತ್ತಾದಾಗ ಅಥವಾ ಮಕ್ಕಳ ಶೈಕ್ಷಣಿಕ ವಿಚಾರವಾಗಿ ಸಂಘದ ನೆರವು ನೀಡುತ್ತೇವೆ. ಪಟ್ಟಣ ಪಂಚಾಯತ ಬೀದಿ ವ್ಯಾಪಾರಿಗಳ ಕೈಯಿಂದ ಕರ ವಸೂಲಿ ಮಾಡಿ ಸರಿಯಾದ ರಶೀದಿ ನೀಡುತ್ತಿಲ್ಲ.ಎಲ್ಲರು ರಶೀದಿ ಪಡೆಯಿರಿ ಇದು ಮುಂದೊಂದು ದಿನ ನಾವು ಪ್ರಶ್ನಿಸಲು ಅನೂಕೂಲವಾಗುತ್ತದೆ ಎಂದರು.

ಬೀದಿ ವ್ಯಾಪಾರಿಗಳ ಸಂಘದ ತಾಲೂಕಾಧ್ಯಕ್ಷ ಸಂದೀಪ ಪೂಜಾರಿ ಮಾತನಾಡಿ, ನಮ್ಮ ಸಂಘದ ಗುರುತಿನ ಕಾರ್ಡ್ ಸಿಕ್ಕ ತಕ್ಷಣ ನಾವು ದಬ್ಬಾಳಿಕೆ ಮಾಡಬಾರದು.ಅಂಗಡಿಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವ ತಪ್ಪುಗಳು ನಮ್ಮಿಂದಾಗುತ್ತಿದೆ‌.ನಾವು ಸ್ವಚ್ಚತೆಗೆ ಆದ್ಯತೆ ಕೊಡಬೇಕು. ಜನರನ್ನು ಗೌರವ ಭಾವದಿಂದ ಕಾಣಬೇಕು.ಪಟ್ಟಣ ಪಂಚಾಯತ ವತಿಯಿಂದ ಆಗುತ್ತಿರುವ ತೊಂದರೆ ಬಗ್ಗೆ ಈಗಾಗಲೇ ಸಂಬಂಧಪಟ್ಟವರೊಂದಿಗೆ ಮಾತನಾಡಿದ್ದೇನೆ ಎಂದರು.

ನಂತರ ಸಂಘದ ಸದಸ್ಯರಿಗೆ ಗುರುತಿನ ಕಾರ್ಡ್ ವಿತರಿಸಲಾಯಿತು. ಸಂಘದ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ರಾಘು ನಾಯ್ಕ,ಸತೀಶ್ ಮೇಸ್ತ,ಕೇಶವ ಮೇಸ್ತ,ಮುನಾಫ್ ಶೇಖ್ ಮತ್ತಿತರಿದ್ದರು.ನೂರಾರು ಸಂಖ್ಯೆಯಲ್ಲಿ ಬೀದಿ ವ್ಯಾಪಾರಿಗಳು ಪಾಲ್ಗೊಂಡಿದ್ದರು.