ದಾಂಡೇಲಿ ತಾಲೂಕಿನ ಮೈನಾಳ ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದ ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ.
ಸ್ಥಳಿಯ ರೈತರು ಬೆಳೆದ ಕಬ್ಬು,ಭತ್ತ ಇನ್ನಿತರ ಕೃಷಿ ಚಟುವಟಿಕೆಗಳ ಮೇಲೆ ಕಾಡಾನೆಗಳು ದಾಳಿ ಮಾಡಿ ತೀವ್ರ ಹಾನಿ ಮಾಡುತ್ತಿದೆ. ವರ್ಷವಿಡಿ ಬೆವರನ್ನು ಹರಿಸಿ ಕೃಷಿ ಚಟುವಟಿಕೆಯಲ್ಲಿ ನಿರತರಾಗುವ ರೈತರಿಗೆ ಬೇಳೆ ಬರುವ ಸಂದರ್ಭದಲ್ಲಿ ವನ್ಯ ಪ್ರಾಣಿಗಳ ಕಾಟದಿಂದಾಗಿ ಶ್ರಮಕ್ಕೆ ತಕ್ಕ ಫಲ ಇಲ್ಲದೇ ಕಣ್ಣಿರಿನಲ್ಲಿ ಕೈ ತೊಳೆಯುವಂತಾಗಿದೆ.
ಈಗಲಾದರೂ ರೈತರ ಸಂಕಷ್ಟವನ್ನು ಅರಿತು ಸಂಬಂಧ ಪಟ್ಟ ಇಲಾಖೆಯವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಾರಾ ಎಂಬುವುದನ್ನು ಕಾದು ನೋಡ ಬೇಕಿದೆ.