ಹೊನ್ನಾವರದ ಗೇರುಸೊಪ್ಪಾ ವೃತ್ತದ ಸಮೀಪ ರಾಷ್ಟ್ರೀಯ ಹೆದ್ದಾರಿ 69ರ ಪಕ್ಕದಲ್ಲೇ ಯಾರೋ ಕಿಡಿಗೇಡಿಗಳು ರಾಶಿ ರಾಶಿ ತ್ಯಾಜ್ಯಗಳನ್ನು ಕಂಡ ಕಂಡಲ್ಲಿ ಎಸೆದು ಹೋಗುತ್ತಿದ್ದು, ಪಟ್ಟಣದ ಸೌಂದರ್ಯವನ್ನು ಹಾಳು ಮಾಡ್ತಿದ್ದಾರೆ. ಇದ್ರಿಂದ ಪಾದಚಾರಿಗಳಿಗೆ ಹಾಗೂ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗ್ತಿದೆ.
ಎಲ್ಲೆಂದರಲ್ಲಿ ಬಿದ್ದಿರೋ ಹಳೆ ಬಟ್ಟೆಗಳು.. ಪ್ಲಾಸ್ಟಿಕ್ ಚೀಲದಲ್ಲಿ ರಾಶಿ ರಾಶಿ ಕಸದ ತ್ಯಾಜ್ಯಗಳು..ಹೌದು ಈ ದೃಶ್ಯ ಕಂಡು ಹೊನ್ನಾವರದ ಗೇರಸೊಪ್ಪಾ ವೃತ್ತದ ಸಮೀಪವಿರುವ ರಾ.ಹೆ69ರಲ್ಲಿ…
ಪ.ಪಂ ಸ್ವಚ್ಛತೆ ಕುರಿತು ಎಷ್ಟೇ ಜನ ಜಾಗೃತಿ ಮೂಡಿಸಿದ್ರೂ ಜನತೆ ಮಾತ್ರ ಎಚ್ಚೆತ್ತುಕೊಂಡಿಲ್ಲ. ಕಂಡಕಂಡಲ್ಲಿ ಕಸ ಎಸೆಯುವ ಮೂಲಕ ಪಟ್ಟಣದ ಸೌಂದರ್ಯವನ್ನು ಹಾಳು ಮಾಡ್ತಿದ್ದಾರೆ. ಪ. ಪಂ ಕಸ ಸಂಗ್ರಹಿಸುವ ವಾಹನ ಜತೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲೆಂದರಲ್ಲಿ ಕಸ ಹಾಕಬಾರದು. ರಸ್ತೆ, ಚರಂಡಿಯಲ್ಲಿ ತ್ಯಾಜ್ಯ ಎಸೆಯುವುದರಿಂದ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡದಂತೆ ಆಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ ದಂಡ ವಿಧಿಸಲಾಗುವುದು ಎಂದು ಜಾಗೃತಿ ಮೂಡಿಸಿದ್ರು ಕೂಡ ಜನ ಮಾತ್ರ ಯಾವುದಕ್ಕೂ ತೆಲೆ ಕೆಡಿಸಿಕೊಳ್ಳದೇ ಎಲ್ಲೆಂದರಲ್ಲಿ ಕಸ ಬಿಸಾಡ್ತಿದ್ದಾರೆ..
ಇನ್ನೂ ಮುಖ್ಯ ರಸ್ತೆಯಲ್ಲಿ ತ್ಯಾಜ್ಯವನ್ನು ಬಿಸಾಡಿದ್ರಿಂದ ಇದೇ ಮಾರ್ಗವಾಗಿ ನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಜೊತೆಗೆ ಪಾದಚಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗ್ತಿದೆ. ಜೊತೆಗೆ ಜನರು ಮಾತ್ರ ದಂಡ ಕಟ್ಟಲು ಸಿದ್ಧರಿದ್ದೇವೇ ಹೊರತು ತ್ಯಾಜ್ಯವನ್ನು ರಸ್ತೆಗೆ ಹಾಕುತ್ತೇವೆ ಎಂಬ ಹಠಕ್ಕೆ ಬಿದ್ದಿದ್ದಾರೆಂಬ ಭಾವನೆ ದಟ್ಟವಾಗಿ ಗೋಚರಿಸುತ್ತಿದೆ.
ಪಟ್ಟಣವನ್ನು ಒಂದು ಸುತ್ತು ಸುತ್ತಿದರೆ ಸಾಕು ಅದೆಷ್ಟು ಕಸದ ರಾಶಿ ಬಿದ್ದಿದೆ ಎಂದು ಗೊತ್ತಾಗುತ್ತೆ. ಬಹುತೇಕ ಪ್ಲಾಸ್ಟಿಕ್ ಕವರ್, ಉಪಯೋಗಿಸಿದ ಬಟ್ಟೆಗಳಿದ್ದು, ಅದನ್ನು ಪ್ಲಾಸ್ಟಿಕ್ ಕವರ್ ನಲ್ಲಿ ತುಂಬಿ ಎಸೆದಿದ್ದಾರೆ. ಇನ್ನು ಕೆಲವೆಡೆ ತರಕಾರಿ,ಹಣ್ಣಿನ ಅಂಗಡಿಗಳಲ್ಲಿನ ತ್ಯಾಜ್ಯ, ವಾಹನದಲ್ಲಿ ಸಂಚರಿಸುವವರು ಕವರ್ ನಲ್ಲಿ ತುಂಬಿ ಎಸೆದಿರುವ ಆಹಾರ ಪದಾರ್ಥಗಳಿದ್ದ ಕವರ ಎಸೆದಿದ್ದು ದುರ್ವಾಸನೆ ಮೂಡಿ ಜನತೆ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ..
ಬೆಂಗಳೂರು-ಹೊನ್ನಾವರ ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯಯ ಹೆದ್ದಾರಿ ಇದಾಗಿದ್ದು, ಹಗಲಿರುಳು ಸಾವಿರಾರು ವಾಹನಗಳು ಸಂಚಾರ ಮಾಡುತ್ತಿರುತ್ತವೆ. ಆದರೆ ಯಾರಿಗೂ ಕಾಣದಂತೆ ಇಲ್ಲಿ ಕಸ ಎಸೆದು ಹೋಗಿರುವುದು ವಿಪರ್ಯಾಸವೇ ಸರಿ. ಸ್ಥಳೀಯ ಪ. ಪಂ ಈ ತ್ಯಾಜ್ಯವನ್ನು ತೆಗೆಯುವ ಗೋಜಿಗೆ ಹೋಗಿಲ್ಲ. ಮನುಷ್ಯರ ಜತೆಗೆ ಜಾನುವಾರುಗಳಿಗೂ ಕೂಡ ಅಪಾಯಕಾರಿಯಾಗಿರುವ ತ್ಯಾಜ್ಯ, ಕಸವನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ವಚ್ಛಗೊಳಿಸಿ, ನಗರದ ಸ್ವಾಸ್ಥ್ಯ ಹಾಖೂ ಮಾಡುತ್ತಿರೀ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಬೇಕಿದೆ..