ದಾಂಡೇಲಿ : ತಾಲೂಕಿನ ಆರಾಧ್ಯ ದೇವರಾದ ಸತ್ಪುರುಷ ಶ್ರೀ.ದಾಂಡೇಲಪ್ಪ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ವಿಜಯದಶಮಿಯ ಶುಭ ದಿನದಂದು ಶ್ರೀ ದಾಂಡೇಲಪ್ಪ ಜಾತ್ರೆ, ಲಕ್ಷಾಂತರ ಭಕ್ತಾಭಿಮಾನಿಗಳ ಸಮ್ಮುಖದಲ್ಲಿ ನಡೆಯಲಿದೆ.
ಈಗಾಗಲೇ ಜಾತ್ರೆಗೆ ಸಂಬಂಧಪಟ್ಟಂತೆ ಎಲ್ಲ ಪೂರ್ವ ಸಿದ್ಧತೆಗಳು ಅಂತಿಮ ಹಂತದಲ್ಲಿದ್ದು, ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ.
ನಗರದ ಹಳಿಯಾಳ ರಸ್ತೆಯಿಂದ ಶ್ರೀ ದಾಂಡೇಲಪ್ಪನ ಸನ್ನಿಧಿಯವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿ ಮುಗ್ಗಟ್ಟುಗಳು ಭರ್ಜರಿ ವ್ಯಾಪಾರಕ್ಕಾಗಿ ಈಗಾಗಲೇ ಎಲ್ಲ ಸಿದ್ಧತೆಗಳನ್ನು ನಡೆಸಿದೆ. ಲಕ್ಷಾಂತರ ಜನ ಭಾಗವಹಿಸುವ ಈ ಜಾತ್ರೋತ್ಸವ ಶಾಂತಿಯುತವಾಗಿ ನಡೆಯುವಂತಾಗಲು ಡಿವೈಎಸ್ಪಿ ಶಿವಾನಂದ್ ಕಟಗಿ ಅವರ ನೇತೃತ್ವದಲ್ಲಿ ವಿಶೇಷ ಭದ್ರತೆಗೆ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ. ತಾಲೂಕಾಡಳಿತ, ನಗರಾಡಳಿತ, ಆಲೂರು ಗ್ರಾಮ ಪಂಚಾಯತ್ ಮತ್ತು ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಹಕಾರದಲ್ಲಿ ಮತ್ತು ಜಾತ್ರೋತ್ಸವ ಸಮಿತಿಯ ನೇತೃತ್ವದಲ್ಲಿ ಸಂಭ್ರಮದ ಜಾತ್ರೆ ನಡೆಯಲಿದೆ.