ಭಟ್ಕಳ: ದಸರಾ ರಜೆ ಹಿನ್ನೆಲೆಯಲ್ಲಿ ಮುರುಡೇಶ್ವರ ಪ್ರವಾಸಕ್ಕೆ ಬಂದ ಮೂವರು ಪ್ರವಾಸಿಗರು ಸಮುದ್ರದಲ್ಲಿ ಈಜಲು ಹೋಗಿ ಸಮುದ್ರ ಪಾಲಾಗುತ್ತಿದ್ದವರನ್ನು ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿರುವ ಘಟನೆ ನಡೆದಿದೆ.
ರಕ್ಷಣೆ ಮಾಡಿದ ಪ್ರವಾಸಿಗರನ್ನು ಶರಣು ಇಂಚರ(21) ಬಸವನ ಗೌಡ ಪಾಟೀಲ್ (22) ರವಿಚಂದ್ರನ್ (22) ಮೂಲತಃ ಬಾಗಲಕೋಟೆ ನಿವಾಸಿಗಳು ಎಂದು ತಿಳಿದು ಬಂದಿದೆ. ಇವರು ಸಾಲು ಸಾಲು ದಸರ ರಜೆ ಹಿನ್ನೆಲೆಯಲ್ಲಿ ಬಾಗಲಕೋಟೆಯಿಂದ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದು. ದೇವರ ದರ್ಶನ ಮುಗಿದ ಬಳಿಕ ಸಮುದ್ರದಲ್ಲಿ ಈಜಲು ತೆರಳಿದ್ದಾರೆ. ಈ ವೇಳೆ ಸಮುದ್ರ ಅಲೆಗೆ ಸಿಲುಕಿದ ಮೂವರು ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳು ತಕ್ಷಣ ಸಮುದ್ರಕ್ಕಿಳಿದು ಮೂವರನ್ನು ರಕ್ಷಣೆ ಮಾಡಿದ್ದಾರೆ.
ಮೂವರು ಪ್ರವಾಸಿಗರನ್ನ ರಕ್ಷಣೆ ಮಾಡಿದ ಲೈಫ್ ಗಾರ್ಡ್ ಸಿಬ್ಬಂದಿ ಶಶಿ, ಪಾಂಡು, ರಾಮಚಂದ್ರ ಹಾಗೂ ಬೀಚ್ ಮೇಲ್ವಿಚಾರಕ ದತ್ತಾತ್ರೇಯ ಶೆಟ್ಟಿ ಉಪಸ್ಥಿತರಿದ್ದರು